ಬೀಳೋ ಸರ್ಕಾರಕ್ಕೆ ನಾವು ಕಲ್ಲು ಹೊಡೆಯಲ್ಲ: ಆರ್​.ಅಶೋಕ್

ಕೋಲಾರ: ಜಿಲ್ಲೆಗೆ ಇಂದು ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡ ಭೇಟಿ ನೀಡಿತು. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೀಲುಕೊಪ್ಪ ಹಾಗೂ ನಲ್ಲಗುಟ್ಲಹಳ್ಳಿ ಗ್ರಾಮಗಳಿಗೆ ತಂಡವು ಭೇಟಿ ನೀಡಿ, ಜಿಲ್ಲೆಯ‌ ಬರ ಪರಿಸ್ಥಿತಿಯ‌ ಬಗ್ಗೆ‌ ಮಾಹಿತಿ ಸಂಗ್ರಹಿಸಿದರು. ರಾಜ್ಯ‌ ನಾಯಕರುಗಳಿಗೆ ಸ್ಥಳೀಯ ‌ಬಿಜೆಪಿ ಮುಖಂಡರು ಸಾಥ್ ನೀಡಿದರು.

ನಂತರ ಮಾತನಾಡಿದ ಆರ್.ಅಶೋಕ್, ಅದಾಗೆ ಬೀಳುವಂತಹ ಸರ್ಕಾರಕ್ಕೆ ನಾವು ಕಲ್ಲು ಹೊಡೆಯಲು ಹೋಗುವುದಿಲ್ಲ. ನಾನೊಬ್ಬ ಸಾಂದರ್ಭಿಕ ಶಿಶು ಎಂದು ಹೇಳಿಕೊಂಡಿರುವ ಕುಮಾರಸ್ವಾಮಿಯವರ ಸರ್ಕಾರ ತಾನಾಗಿಯೇ ಬೀಳುತ್ತದೆ. ಸರ್ಕಾರ ಬೀಳುವುದಕ್ಕೆ ಬಿಜೆಪಿ ಕಾರಣ ಆಗುವುದಿಲ್ಲ. ಬದಲಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾರಣರಾಗುತ್ತಾರೆ. ಕುಮಾರಸ್ವಾಮಿಯವರದು ಜನ ಪರ ಸರ್ಕಾರ ಅಲ್ಲ ಅದೊಂದು ವಾಸ್ತು ಸರ್ಕಾರ. ವಿಧಾನ ಸಭೆ ನಡೆಯಲು ರಾಹು ಕಾಲ ನೋಡುವ ಇಂತಹ ವರ್ಸ್ಟ್ ಸರ್ಕಾರವನ್ನ ನಾನು ನೋಡಿಯೇ ಇಲ್ಲ. ನಿಮ್ಮ ಮನೆಗಳಲ್ಲಿ ವಾಸ್ತು, ಪೂಜೆಗಳನ್ನ ಇಟ್ಟುಕೊಳ್ಳಿ, ವಿಧಾನ ಸಭೆಗೆ ಇವೆಲ್ಲಾ ತರಬೇಡಿ ಎಂದು ಕುಮಾರಸ್ವಾಮಿ ಹಾಗೂ ರೇವಣ್ಣ ವಿರುದ್ದ ಆರ್.ಅಶೋಕ್ ಚಾಟಿ ಬೀಸಿದರು.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv