ಕಾಫಿ ಮೂಟೆಗಳ ಮಧ್ಯೆ ಹೆಬ್ಬಾವು ಏನ್ ಮಾಡ್ತಿತ್ತು?

ಚಿಕ್ಕಮಗಳೂರು: ಕಾಫಿ ಗೋದಾಮಿನಲ್ಲಿ ಎಂಟು ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡು ಕೆಲಸಗಾರರನ್ನ ಬೆಚ್ಚಿ ಬೀಳಿಸಿದೆ. ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್‌ನ ಕೆ.ಎಂ.ರಸ್ತೆಯ ಪಂಚಮಿ ಗೋದಾಮಿನಲ್ಲಿ ಕಾಫಿ ಮೂಟೆ ಮೇಲೆ ಹೆಬ್ಬಾವು ಮಲಗಿಕೊಂಡಿತ್ತು. ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಹೆಬ್ಬಾವನ್ನ ನೋಡಿ ಹೆದರಿದ್ದಾರೆ, ತಕ್ಷಣ ಮಾಲೀಕ ನಾಣಯ್ಯಗೆ ತಿಳಿಸಿದ್ದಾರೆ. ನಾಣಯ್ಯ ಸ್ನೇಕ್ ನರೇಶ್‌ ಅವರನ್ನ ಕರೆಸಿ, ಹೆಬ್ಬಾವನ್ನ ಸೆರೆಹಿಡಿದಿದ್ದಾರೆ. ನಂತರ ಹೆಬ್ಬಾವನ್ನ ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಅರಣ್ಯಕ್ಕೆ ಬಿಡಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv