‘ಎನ್.ಮಹೇಶ್ ರಾಜೀನಾಮೆಗೂ ನನಗೂ ಯಾವುದೇ ಸಂಬಂಧ ಇಲ್ಲ’

ಬೆಂಗಳೂರು: ‘ಶಿಕ್ಷಣ ಸಚಿವ ಎನ್.ಮಹೇಶ್ ರಾಜೀನಾಮೆಗೂ ನನಗೂ ಯಾವುದೇ ಸಂಬಂಧ ಇಲ್ಲ’ ಅಂತಾ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಫಸ್ಟ್​ನ್ಯೂಸ್​​ಗೆ ತಿಳಿಸಿದ್ದಾರೆ. ಅವರು ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷವನ್ನ ಕಿತ್ತುಹಾಕುತ್ತೇವೆ  ಎಂದು ಅವರು ಹೇಳಿದ್ದರು. ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದಕ್ಕೆ ಸಮರ್ಥನೆ ಮಾಡಿಕೊಂಡಿದ್ದೆ ಅಷ್ಟೇ. ನನ್ನ ಹಾಗೂ ಮಹೇಶ್ ನಡುವೆ ಯಾವುದೇ ಅಸಮಾಧಾನ ಇರಲಿಲ್ಲ. ರಾಜೀನಾಮೆ ನೀಡಲು ಅವರ ಹೈಕಮಾಂಡ್ ಅದೇಶ ಇರಬಹುದೇನೋ ಅಂತಾ ಹೇಳಿದರು.

ಈ ಹಿಂದೆ ಎನ್​.ಮಹೇಶ್ ಕಾಂಗ್ರೆಸ್​ ಕಳೆಯನ್ನ ಬುಡ ಸಮೇತ ಕಿತ್ತು ಹಾಕುವುದಾಗಿ ಹೇಳಿದ್ದರು. ಇದಕ್ಕೆ ಪುಟ್ಟರಂಗಶೆಟ್ಟಿ ಆಕ್ರೋಶ ವ್ಯಕ್ತಪಡಿಸಿ, ಎನ್​.ಮಹೇಶ್ ಅಪ್ಪಿತಪ್ಪಿ ಚುನಾವಣೆಯಲ್ಲಿ ಗೆದ್ದಿದ್ದಾನೆ. ಅದನ್ನು ತಿಳಿದುಕೊಂಡು ರಾಜಕೀಯ ಮಾಡಲಿ. ಸರ್ಕಾರದಲ್ಲಿ ಅವನು ಒಬ್ಬನೇ ಇದ್ದಾನೆ. ನಾವು ಮನಸ್ಸು ಮಾಡಿದರೆ ಎನ್‌. ಮಹೇಶ್‌ ಉಳಿಯುವುದಿಲ್ಲ ಅಂತಾ ಎಚ್ಚರಿಕೆ ನೀಡಿದ್ದರು.