ಮುಸ್ಲಿಂ‌ ಮತ ಗಳಿಕೆಗಾಗಿ ಸುಮಲತಾ ಬಿಜೆಪಿ ಅಭ್ಯರ್ಥಿ ಅಲ್ಲ‌ ಅಂತಾರೆ -ಸಚಿವ ಪುಟ್ಟರಾಜು

ಮಂಡ್ಯ:  ಮುಸ್ಲಿಂ‌ ಮತ ಗಳಿಕೆಗಾಗಿ ಸುಮಲತಾ ಬಿಜೆಪಿ ಅಭ್ಯರ್ಥಿ ಅಲ್ಲ‌ ಅಂತಾರೆ. ಆದ್ರೆ ಹೋಟೆಲ್‌ನಲ್ಲಿ ಕುಳಿತು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸ್ತಾರೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

ಪಾಂಡವಪುರದಲ್ಲಿ ನಡೆದ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ  ಪುಟ್ಟರಾಜು, ಮೋದಿ ಸಂಪುಟದಲ್ಲಿ ಮಂತ್ರಿ ಮಾಡಿಸ್ಬೇಕು ಅಂತ ಹೇಳ್ತಾರೆ. 18ನೇ ತಾರೀಖು ಕಳೆಯಲಿ, ವಿತ್ ವಿಡಿಯೋ ಕ್ಲಿಪ್ ಬಿಡುಗಡೆ ಮಾಡ್ತೀವಿ. ಆಹಾ…ಯಾವ ಪಿಹೆಚ್‌ಡಿ ಮಾಡಿರೋರು ಆಡದಂತ ಮಾತುಗಳನ್ನ ಅವರು ಆಡಿದ್ದಾರೆ. ಅವರು ದೇವೇಗೌಡರು ಕೈಕಟ್ಟಿ ನಿಲ್ಲುವಂತ‌ ಮಾತುಗಾರಿಕೆಯನ್ನ ಬೆಳೆಸಿಕೊಂಡಿದ್ದಾರೆ ಅಂತಾ ಸಚಿವ ಪುಟ್ಟರಾಜು ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv