ಕಾರ್ಮೋಡ ಸರಿದು ಚಿತ್ರಕ್ಕೆ ‘ಪವರ್‌ಪುಲ್‌’ ವಿಶ್‌!

ರಾಕಿಂಗ್​​ಸ್ಟಾರ್​​ ಯಶ್ ಹಾಗೂ ರಾಧಿಕಾ ಪಂಡತ್​ ನಟಿಸಿದ್ದ ಸೂಪರ್ ಹಿಟ್ ಮಿಸ್ಟರ್​​ ಆಂಡ್​​​ ಮಿಸೆಸ್​​ ರಾಮಾಚಾರಿ ಮೂವೀ ಬಾಕ್ಸ್​ ಆಫೀಸ್​ ಧೂಳೀಪಟ ಮಾಡಿತ್ತು. ಈ ಚಿತ್ರದಲ್ಲಿ ನಾಯಕಿ ರಾಧಿಕಾ ಪಂಡಿತ್​​ ಸ್ನೇಹಿತೆಯಾಗಿ ಅಭಿನಯಿಸಿದ್ದ ಅದ್ವಿತಿ ಶೆಟ್ಟಿ ಅನ್ನೋ ನಟಿ ಕೂಡ ಅಷ್ಟೇ ಗಮನ ಸೆಳೆದಿದ್ದರು. ಈ ಹುಡುಗಿ ಮುಂದೊಂದು ದಿನ ನಾಯಕಿಯಾಗಿ ಮಿಂಚಬಹುದು ಅಂತಾ ಚಿತ್ರ ರಸಿಕರು ಮಾತನಾಡಿಕೊಂಡಿದ್ದರು. ಹೌದು, ಜನರ ಆಶಯ ಈಗ ನನಸಾಗಿದ್ದು, ಕಾರ್ಮೋಡ ಸರಿದು ಎಂಬ ಸಿನಿಮಾ ಮೂಲಕ ಲೀಡ್​​ ರೋಲ್​​ನಲ್ಲಿ ನಟಿಸಿದ್ದಾರೆ ಅದ್ವಿತಿ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್​​ ಲಾಂಚ್​​ ಆಗಿದೆ. ವಿಶೇಷ ಅಂದ್ರೆ ಕಾರ್ಮೋಡ ಸರಿದು ಸಿನಿಮಾಗೆ ಪವರ್ ಫುಲ್​ ವಿಶಸ್​ ಹರಿದು ಬಂದಿವೆ.

ಕಾರ್ಮೋಡ ಸರಿದು ಚಿತ್ರಕ್ಕೆ ಪವರ್​​ಸ್ಟಾರ್​​ ವಿಶ್​​.!
ಹೊಸಬರ ಚಿತ್ರಕ್ಕೆ ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್ ಯಾವಾಗಲು ಸಪೋರ್ಟ್ ಮಾಡ್ತಾನೆ ಇರ್ತಾರೆ. ಕಾರ್ಮೋಡ ಸರಿದು ಚಿತ್ರಕ್ಕೂ ಪುನೀತ್‌ ಶುಭ ಹಾರೈಸಿದ್ದಾರೆ. ‘ಕಾರ್ಮೋಡ ಸರಿದು ಸಿನಿಮಾದ ಟ್ರೈಲರ್​​ ನೋಡಿದೆ. ತುಂಬಾ ಚೆನ್ನಾಗಿದೆ. ಕುದರೆ ಮುಖದಲ್ಲಿ ಈ ಸಿನಿಮಾ ಶೂಟ್​​ ಮಾಡಿದ್ದಾರೆ. ಕ್ಯಾಮೆರಾ ವರ್ಕ್​ ಅದ್ಬುತವಾಗಿ ಮೂಡಿಬಂದಿದೆ. ಟ್ರೈಲರ್​​ ನೋಡಿದ್ರೆ ಸಿನಿಮಾದಲ್ಲಿ ಏನೋ ಹೊಸತನ ಇದೆ ಅನ್ನಿಸುತ್ತಿದೆ. ನನಗೆ ಕುದುರೆ ಮುಖ ಅಂದಾಕ್ಷಣ ತುಂಬಾನೇ ಹಳೆ ನೆನಪುಗಳು ಮರುಕಳಿಸುತ್ತವೆ. ಸಿನಿಮಾದಲ್ಲಿ ಅಭಿನಯಿಸಿರುವ ನಾಯಕ ನಟ ಹಾಗೂ ನಾಯಕಿಗೆ ಒಳ್ಳೆಯದಾಗಲಿ. ನಾನು ಕೂಡ ಒಂದು ಪ್ರೊಡಕ್ಷನ್ ಸಂಸ್ಥೆ ಹೊಂದಿದ್ದೇನೆ, ಮೇಲಾಗಿ ನಾನೂ ಒಬ್ಬ ನಟ. ಹೀಗಾಗಿ ಮತ್ತೋರ್ವ ನಟ ಹಾಗೂ ಮತ್ತೊಂದು ಪ್ರೊಡಕ್ಷನ್ ಸಂಸ್ಥೆ ನಿರ್ಮಿಸಿರುವ ಸಿನಿಮಾವನ್ನು ಪ್ರೋತ್ಸಾಹಿಸುವುದು ಒಳ್ಳೆಯದು ಎನ್ನುವ ಮೂಲಕ ಚಿತ್ರತಂಡಕ್ಕೆ’ ಪವರ್‌ಸ್ಟಾರ್‌ ಪುನೀತ್‌ ವಿಶ್ ಮಾಡಿದ್ದಾರೆ.

ಯಶಸ್ಸಿನ ಮಳೆ ಸುರಿಯಲಿ ಎಂದ ವಿಜಿ!
ದುನಿಯಾ ವಿಜಯ್​​ ಕೂಡ ಕಾರ್ಮೋಡ ಸರಿದು ಚಿತ್ರತಂಡಕ್ಕೆ ವಿಶ್​​ ಮಾಡಿದ್ದಾರೆ. ‘ಕಾರ್ಮೋಡ ಸರಿದು ಚಿತ್ರದ ಟ್ರೈಲರ್​​ ಈಗತಾನೆ ನೋಡಿದೆ. ನನಗೆ ತುಂಬಾ ಖುಷಿ ಆಯ್ತು. ಉದಯ್​​ ಅವರಿಗೆ ಆಲ್​​ ದಿ ಬೆಸ್ಟ್​​​​. ಈ ಸಿನಿಮಾದಿಂದ ಕಾರ್ಮೋಡ ಸರಿದು ಯಶಸ್ಸಿನ ಮಳೆ ಸದಾ ಸುರಿಯುತ್ತಿರಲಿ’ ಎಂದು ದುನಿಯಾ ವಿಜಯ್‌ ಶುಭ ಹಾರೈಸಿದ್ದಾರೆ. ಅಂದ್ಹಾಗೆ, ಯುವ ನಟ ಮಂಜು ರಾಮಣ್ಣ ಈ ಚಿತ್ರದಲ್ಲಿ ನಾಯಕನಾಗಿದ್ದು, ಅದ್ವಿತಿ ನಾಯಕಿಯಾಗಿ ನಟಿಸಿದ್ದಾರೆ. ಮಲೆನಾಡಿನಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುವ ಪಾತ್ರದಲ್ಲಿ ಅದ್ವಿತಿ ನಟಿಸಿದ್ದು, ಕುದುರೆಮುಖ ಟಾಕೀಸ್ ಬ್ಯಾನರ್ ಅಡಿ ನಿರ್ಮಾಣವಾಗಿರೋ ಚಿತ್ರಕ್ಕೆ ಉದಯ್‌ ಆಕ್ಷನ್‌ ಕಟ್ ಹೇಳಿದ್ದಾರೆ.