ಶಿವಣ್ಣನ ನಟನೆಗೆ ಅಪ್ಪು ಕ್ಲೀನ್ ಬೋಲ್ಡ್ ..!

ದೊಡ್ಮನೆ ಸ್ಟಾರ್​ಗಳ ಸಿನಿಮಾಗಳು ಅಂದ್ರೆನೇ ಅಭಿಮಾನಿಗಳಿಗೆ ದೊಡ್ಡ ಕ್ರೇಜ್. ಇನ್ನು ಯೂತ್ ಎನರ್ಜಿ ಬೂಸ್ಟರ್​ ಶಿವಣ್ಣನ ಸಿನಿಮಾ ಅಂದ್ರೆ ಕೇಳ್ಬೇಕಾ..! ​ಈ ಹಿಂದೆ ಮಚ್ಚು, ಲಾಂಗ್ ಹಿಡಿದು ಅಬ್ಬರಿಸಿದ್ದ ಶಿವಣ್ಣ ಇದೀಗ ಖಡಕ್ ಪೊಲೀಸ್ ಅಧಿಕಾರಿ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ರವಿವರ್ಮ- ಶಿವಣ್ಣ ಕಾಂಬಿನೇಷನ್​ನ ಬಹುನಿರೀಕ್ಷಿತ ರುಸ್ತುಂ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಶಿವಣ್ಣ ಪಕ್ಕಾ ಪೊಲೀಸ್ ಆಗಿ ಘರ್ಜಿಸಿದ್ದಾರೆ. ‘ನಂಗೆ ಅರೆಸ್ಟ್​ ಅಂದ್ರೆ ಅಲರ್ಜಿ, ಎನ್​ಕೌಂಟರ್ ಅಂದ್ರೆ ತುಂಬಾನೇ ಎನರ್ಜಿ’ ಅನ್ನೋ ಪಂಚಿಂಗ್ ಡೈಲಾಗ್​ಗೆ ಅಭಿಮಾನಿಗಳು ಪುಲ್ ಫಿದಾ ಆಗಿದ್ದಾರೆ.
ಅಣ್ಣನ ಚಿತ್ರಕ್ಕೆ ತಮ್ಮನ ವಿಶ್..!
ಡಾ.ರಾಜ್ ಫ್ಯಾಮಿಲಿಯಲ್ಲಿ ಯಾವುದೇ ಸಿನಿಮಾವಾದ್ರು ಪರಸ್ಪರ ಅಣ್ಣ ತಮ್ಮಂದಿರು ಶುಭ ಹಾರೈಸುತ್ತಾರೆ. ಈಗಾಗಲೇ ಹಲವು ತಾರೆಯರು ಟ್ರೇಲರ್ ಮೆಚ್ಚಿ ವಿಶ್ ಮಾಡಿದ್ರು. ಇದೀಗ ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ ಟ್ರೇಲರ್​ನಲ್ಲಿ ಅಣ್ಣನ ನಟನೆ ಕಂಡು ಫುಲ್ ಬೋಲ್ಡ್ ಆಗಿದ್ದಾರೆ. ಶಿವಣ್ಣನನ್ನು ಪೊಲೀಸ್ ಗೆಟಪ್​ನಲ್ಲಿ ನೋಡೋಕೆ ತುಂಬಾನೇ ಖುಷಿಯಾಗುತ್ತೆ. ಸಖತ್ ರಗಡ್​ ಲುಕ್​ನಲ್ಲಿಯೇ ಮಿಂಚಿದ್ದಾರೆ. ಟ್ರೈಲರ್ ಕೂಡ ಅದ್ಬುತವಾಗಿ ಮೂಡಿಬಂದಿದ್ದು. ರವಿವರ್ಮ ಸರ್ ಹಾಗೂ ಇಡೀ ಚಿತ್ರತಂಡಕ್ಕೆ ಶುಭವಾಗಲಿ ಅಂತಾ ಟ್ವಿಟರ್​ ಮೂಲಕ ಹರಸಿದ್ದಾರೆ. ಇನ್ನು ಚಿತ್ರದಲ್ಲಿ ವಿವೇಕ್ ಒಬೆರಾಯ್, ಶ್ರದ್ದಾ ಶ್ರೀನಾಥ್ ಸೇರಿದಂತೆ ಬಹುತೇಕ ತಾರೆಯರು ಬಣ್ಣ ಹಚ್ಚಿದ್ದಾರೆ.