ಪುಲ್ವಾಮಾ ದಾಳಿ ಎಫೆಕ್ಟ್; ಪಾಕಿಸ್ತಾನಕ್ಕೆ ಟೊಮೇಟೊ ರಫ್ತು ಮಾಡದಿರಲು ರೈತರ ನಿರ್ಧಾರ

ಭೋಪಾಲ್: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​​​ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಟೊಮೇಟೊ ಬೆಳೆಗಾರರು ಪಾಕಿಸ್ತಾನಕ್ಕೆ ಇನ್ಮುಂದೆ ತಮ್ಮ ಉತ್ಪನ್ನವನ್ನು ರಪ್ತು ಮಾಡುವದಿಲ್ಲ ಎಂದು ನಿರ್ಧರಿಸಿದ್ದಾರೆ.

ಜಬುವಾ ಜಿಲ್ಲೆಯ ಪೆಟ್ಲವಾಡ್ ಗ್ರಾಮದಲ್ಲಿ ಸುಮಾರು 5 ಸಾವಿರ ರೈತರು ಟೊಮೇಟೊ ಬೆಳೆಯುತ್ತಿದ್ದು, ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಇನ್ನು ಮುಂದೆ ಪಾಕಿಸ್ತಾನಕ್ಕೆ ಟೊಮೇಟೋ ರಫ್ತು ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರೆ.

ಈ ಕುರಿತು ಮಾತನಾಡಿದ ಟೊಮೇಟೋ ಬೆಳೆಗಾರ ಬಸಂತಿ ಲಾಲ್ ಪಾಟಿದಾರ್, ಕಳೆದ ಒಂದೂವರೆ ದಶಕದಿಂದ ನಾವು ಟೊಮೇಟೋ ಬೆಳೆಯುತ್ತಿದ್ದೇವೆ. ಅವುಗಳನ್ನ ದೆಹಲಿಯ ಏಜೆಂಟ್​ ಮೂಲಕ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದೆವು. ಅದರಿಂದ ನಮಗೆ ಒಳ್ಳೆಯ ಲಾಭವೂ ಬರುತ್ತಿತ್ತು. ಆದರೆ ನಮ್ಮ ಸೈನಿಕರ ಮೇಲೆ ಪಾಕಿಸ್ತಾನದ ಉಗ್ರರು ಪದೇ ಪದೇ ದಾಳಿ ಮಾಡುತ್ತಿರುವುದನ್ನ ಖಂಡಿಸಿ ಇನ್ನು ಮುಂದೆ ನಾವು ಪಾಕಿಸ್ತಾನಕ್ಕೆ ಟೊಮೇಟೋ ರಫ್ತು ಮಾಡದಿರಲು ತಿರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಮತ್ತೂಬ್ಬ ಟೊಮೇಟೋ ಬೆಳೆಗಾರ ಮಹೇಂದ್ರ ಆಮದ್, ನಾವು ಪಾಕಿಸ್ತಾನಕ್ಕೆ ಟೊಮೇಟೋ ರಪ್ತು ಮಾಡಿ ಒಳ್ಳೆಯ ಹಣ ಸಂಪಾದಿಸುತ್ತೇವೆ. ಆದರೆ ಈಗ ಆ ಹಣ ನಮಗೆ ವಿಷದ ರೀತಿ. ನಮ್ಮ ದೇಶದ ಟೊಮೇಟೋ ತಿಂದವರೇ ಹಿಂದಿನಿಂದ ಪಿತೂರಿ ನಡೆಸಿ ನಮ್ಮ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ. ನಮಗೆ ಹಣಕ್ಕಿಂತ ನಮ್ಮ ಸೈನಿಕರ ಪ್ರಾಣ ಮುಖ್ಯ ಎಂದು  ಹೇಳುತ್ತಾರೆ.

ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್ ಅವರು ರೈತರ ಈ ನಿರ್ಧಾರವನ್ನ ಶ್ಲಾಘಿಸಿದ್ದಾರೆ. ಟೊಮೇಟೋ ಬೆಳೆಗಾರರ ದೇಶಪ್ರೇಮವನ್ನು ಶ್ಲಾಘಿಸಲೇಬೇಕು. ತಮ್ಮ ವೈಯಕ್ತಿಕ ಲಾಭಕ್ಕಿಂತ ಅವರಿಗೆ ದೇಶದ ಹಿತಾಸಕ್ತಿಯೇ ಮುಖ್ಯವಾಗಿರುವುದು ಖುಷಿಯ ಸಂಗತಿ. ದೇಶದ ಪ್ರತಿ ನಾಗರಿಕರು ಇಂತವರಿಂದ ಸ್ಫೂರ್ತಿ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.


Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv