ಯೋಧರ ಕುಟಂಬಕ್ಕೆ ಮಹಮ್ಮದ್ ಶಮಿ ಆರ್ಥಿಕ ನೆರವು..!

ಪುಲ್ವಾಮ ಉಗ್ರರ ದಾಳಿಗಯಲ್ಲಿ ಬಲಿಯಾದ ಯೋಧರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು, ಟೀಮ್ ಇಂಡಿಯಾ ಬೌಲರ್ ಮಹಮ್ಮದ್ ಶಮಿ ನಿರ್ಧರಿಸಿದ್ದಾರೆ. ಯೋಧರು ಗಡಿಯಲ್ಲಿ ನಿಂತು ನಮ್ಮನ್ನು ಕಾಯುತ್ತಾರೆ. ನಾವು ಇಂದು ಸುರಕ್ಷಿತವಾಗಿದ್ದೇವೆ ಎಂದರೆ ಅದಕ್ಕೆ ಯೋಧರೇ ಕಾರಣ. ಹೀಗಾಗಿ ಅವರ ಕುಟುಂಬಕ್ಕೆ ನೆರವಾಗುವುದು ನಮ್ಮ ಕರ್ತವ್ಯ ಎಂದು ಶಮಿ ಹೇಳಿದ್ದಾರೆ. ಶಮಿಗು ಮುನ್ನ ಟೀಮ್ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್​ ತಮ್ಮ ಸೆಹ್ವಾಗ್ ಇಂಟರ್​​ನ್ಯಾಷನಲ್ ಶಾಲೆಯಲ್ಲಿ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದ್ದಾರೆ. ಶಿಖರ್‌ ಧವನ್‌ ಕೂಡ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ವಿದರ್ಭ ಕ್ರಿಕೆಟ್​ ತಂಡ ಇರಾನಿ ಟ್ರೋಫಿ ಗೆದ್ದ ನಂತರ ಬಂದ ಬಹುಮಾನದ ಮೊತ್ತವನ್ನ ಸೈನಿಕರ ಕುಟುಂಬಕ್ಕೆ ಅರ್ಪಿಸಿದ್ದಾರೆ.