ಭದ್ರತಾ ವೈಫಲ್ಯವೂ ದಾಳಿಗೆ ಕಾರಣ: RAW ಮಾಜಿ ಮುಖ್ಯಸ್ಥ

ಹೈದರಾಬಾದ್​​​: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಿಆರ್​ಪಿಎಫ್​ನ 40 ಯೋಧರು ಹುತ್ಮಾರಾಗಿದ್ದರು. ಈ ಕೃತ್ಯ ನಡೆಸಲು ಕೇವಲ ಒಬ್ಬನಿಂದ ಸಾಧ್ಯವಿಲ್ಲ ಇದರ ಹಿಂದೆ ಉಗ್ರರ ಗುಂಪೇ ಇದೆ ಅಂತ ಗುಪ್ತಚರ ಸಂಸ್ಥೆ RAW (ರಿಸರ್ಚ್​ & ಅನಲಿಸ್ಟ್​ ವಿಂಗ್​) ಮಾಜಿ ಮುಖ್ಯಸ್ಥ ವಿಕ್ರಂ ಸೂದ್ ಅಭಿಪ್ರಾಯಪಟ್ಟಿದ್ದಾರೆ. ಭದ್ರತಾ ವೈಫಲ್ಯವೇ ಈ ದುರ್ಘಟನೆಗೆ ಪ್ರಮುಖ ಕಾರಣ ಅಂತ ಕೂಡ ಅವರು ಹೇಳಿದ್ದಾರೆ. ನನಗೆ ನಿಜಕ್ಕೂ ಈ ದುರಂತ ಹೇಗೆ ನಡೆಯಿತು ಅನ್ನೋದು ಗೊತ್ತಿಲ್ಲ. ಆದ್ರೆ, ಈ ರೀತಿಯ ಘಟನೆಗಳು ಭದ್ರತಾ ವೈಫಲ್ಯವಿಲ್ಲದೇ ನಡೆಯಲು ಸಾಧ್ಯವಿಲ್ಲ. ಎಲ್ಲೋ ಭದ್ರತಾ ವೈಫಲ್ಯವಾಗಿದೆ. ಈ ಘಟನೆಯಲ್ಲಿ ಒಬ್ಬನ ಕೈವಾಡ ಮಾತ್ರವಿಲ್ಲ. ಈ ವಿಧ್ವಂಸಕ ಕೃತ್ಯದ ಹಿಂದೆ ಉಗ್ರರ ಗುಂಪಿರಬಹುದು . ಒಬ್ಬ ಸ್ಫೋಟಕಗಳನ್ನ ತಂದಿರಬಹುದು. ಇನ್ನೊಬ್ಬ ಕಾರು ತಂದಿರಬಹುದು. ಮತ್ತೊಬ್ಬ ಸ್ಫೋಟಕಗಳನ್ನ ಕಾರಿನಲ್ಲಿ ಒಟ್ಟುಗೂಡಿಸಿರಬಹುದು. ಉಗ್ರರಿಗೆ ಸಿಆರ್​ಪಿಎಫ್​ ವಾಹನಗಳ ಚಲನವಲನಗಳ ಬಗ್ಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಈ ರೀತಿಯ ದಾಳಿ ನಡೆದಿದೆ ಅಂತಾ ವಿಕ್ರಂ ಸೂದ್​ ಅಭಿಪ್ರಾಯ ಪಟ್ಟಿದ್ದಾರೆ