PUC ಫಲಿತಾಂಶ ಪ್ರಕಟ, ಈ ಬಾರಿಯೂ ಉಡುಪಿ ನಂಬರ್ ಒನ್..!

ಬೆಂಗಳೂರು: 2018-19ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಉಡುಪಿ ಜಿಲ್ಲೆ ಶೇಕಡ 92.20 ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ಇನ್ನು ಶೇ. 90.91ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ದಕ್ಷಿಣ ಕನ್ನಡದ ಪಾಲಾಗಿದ್ದರೆ, ಶೇ. 83.31ರಷ್ಟು ಫಲಿತಾಂಶದೊಂದಿಗೆ  ಕೊಡಗು ಜಿಲ್ಲೆಗೆ ತೃತೀಯ ಸ್ಥಾನ ಸಿಕ್ಕಿದೆ. ಚಿತ್ರದುರ್ಗ ಶೇ. 51.42ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನ ಪಡೆದಿದೆ. ಎಂದಿನಂತೆ ಈ ಬಾರಿಯೂ ಯುವತಿಯರೇ ಮೇಲುಗೈ ಸಾಧಿಸಿದ್ದಾರೆ.

ಈ ವರ್ಷ ಶೇಕಡ 61.73 ರಷ್ಟು ಫಲಿತಾಂಶ ಬಂದಿದ್ದು. ಕಳೆದ ಬಾರಿಗೆ ಹೋಲಿಸಿದ್ರೆ ಶೇ. 2.15 ರಷ್ಟು ಫಲಿತಾಂಶ ಹೆಚ್ಚಾಗಿದೆ. ಕಲಾ ವಿಭಾಗದಲ್ಲಿ ಶೇ 50.53 ರಷ್ಟು, ವಿಜ್ಞಾನ ವಿಭಾಗ ಶೇ 66.58 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 66.39 ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ. ಆ ಮೂಲಕ ವಿಜ್ಞಾನ ವಿಭಾಗವೇ ಮೊದಲ ಸ್ಥಾನ ಪಡೆದಿದೆ. 80 ಕಾಲೇಜುಗಳಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದ್ರೆ, 98 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಆ ಪೈಕಿ 94 ಕಾಲೇಜುಗಳು ಖಾಸಗಿಯದ್ದೇ ಆಗಿದೆ.

ಈ ಬಾರಿ 6 ಲಕ್ಷದ 20 ಸಾವಿರದ 653 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರು. ಗ್ರಾಮಾಂತರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದು, ಶೇಕಡ 62.88 ರಷ್ಟು ಗ್ರಾಮಾಂತರ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಹಾಗೇ ಶೇ.61.38 ರಷ್ಟು ನಗರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇನ್ನು ಉತ್ತರಪತ್ರಿಕೆಯ ಮರುಮೌಲ್ಯಮಾಪನಕ್ಕೆ ಅವಕಾಶವಿದ್ದು, ಪ್ರತಿ ವಿಷಯಕ್ಕೆ ₹1,670 ನಿಗದಿ ಮಾಡಲಾಗಿದೆ.  ಪೂರಕ ಪರೀಕ್ಷೆಗೆ ಇದೇ ತಿಂಗಳ 30ನೇ ತಾರೀಖು ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

ಒಟ್ಟು 600 ಅಂಕಗಳಿಗೆ ಪ್ರತಿ ವಿಭಾಗದಲ್ಲಿ ಬಂದಿರುವ ಅತೀ ಹೆಚ್ಚು ಅಂಕ: 

ವಾಣಿಜ್ಯ ವಿಭಾಗ: 596
ವಿಜ್ಞಾನ ವಿಭಾಗ: 594
ಕಲಾ ವಿಭಾಗ: 594

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv