ಪಿಯುಸಿ ರಿಸಲ್ಟ್, ಈ ಬಾರಿಯೂ ಹುಡುಗಿಯರದ್ದೇ ದರ್ಬಾರ್​..!

ಬೆಂಗಳೂರು: 201819ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಹುಡುಗರಿಗಿಂತ ಭಾರೀ ಅಂತರದಲ್ಲಿ ಮೇಲುಗೈ ಸಾಧಿಸಿದ್ದಾರೆ. ಶೇಕಡಾ 68.24 ರಷ್ಟು ವಿದ್ಯಾರ್ಥಿನಿಯರು ಪಾಸ್​ ಆಗಿದ್ದಾರೆ. ಶೇ. 55.29 ರಷ್ಟು ಯುವಕರು ಪಾಸ್ ಆಗಿದ್ದಾರೆ. ಒಟ್ಟು ಪರೀಕ್ಷೆ ಬರೆದಿದ್ದ 6,71,653 ವಿದ್ಯಾರ್ಥಿಗಳಲ್ಲಿ 2,27,897 ಬಾಲಕಿಯರು ಪಾಸ್​ ಆಗಿದ್ದಾರೆ. ಹಾಗೇ ಹುಡುಗರಲ್ಲಿ  1,86,690 ಮಂದಿ ಪಾಸ್ ಆಗಿದ್ದಾರೆ. ಇನ್ನು, ನಗರದ ವಿದ್ಯಾರ್ಥಿಗಳಿಗೆ ಹೋಲಿಸಿದ್ರೆ ಗ್ರಾಮೀಣ ವಿದ್ಯಾರ್ಥಿಗಳೇ ಉತ್ತಮ ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳ ಫಲಿತಾಂಶ ಶೇ.62.88 ಆಗಿದ್ರೆ, ನಗರ ಪ್ರದೇಶದಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಶೇ.61.38 ಬಂದಿದೆ. ಒಟ್ಟು ಫಲಿತಾಂಶ ಶೇಕಡಾ 61.73 ರಷ್ಟಾಗಿದ್ದು.  ಕಳೆದ ಬಾರಿ ಶೇ. 59.16ರಷ್ಟು ಫಲಿತಾಂಶ ಬಂದಿತ್ತು. ಇದಕ್ಕೆ ಹೋಲಿಸಿದ್ರೆ 2.17 ರಷ್ಟು ಇಂಪ್ರೂವ್ಮೆಂಟ್​ ಈ ಬಾರಿ ಕಾಣಬಹುದಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv