ಮಕ್ಕಳ ಕಳ್ಳನ ವದಂತಿ, ವ್ಯಕ್ತಿಯೊಬ್ಬನಿಗೆ ಗ್ರಾಮಸ್ಥರ ಏಟು

ಹಾಸನ: ಹಾಸನದಲ್ಲಿ ಮಕ್ಕಳ ವದಂತಿ ಇನ್ನೂ ನಿಂತಿಲ್ಲ. ಮಕ್ಕಳ ಕಳ್ಳ ಅಂತಾ ಅನ್ಕೋಂಡು ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ, ಚನ್ನರಾಯಪಟ್ಟಣ ತಾಲೂಕು ಕುಂದೂರು ಮಠದ ಮೆಳಿಯಮ್ಮ ದೇವಾಲಯ ಬಳಿ ನಡೆದಿದೆ. ನುಗ್ಗೇಹಳ್ಳಿಯ ಜಾನ್ ಥಳಿತಕ್ಕೊಳಗಾದ ವ್ಯಕ್ತಿ. ಮದ್ಯಪಾನ ನಂತರ ಬಾಡೂಟ ತಿಂದು ಮನೆಗೆ ಜಾನ್​ ಮನೆಗೆ ತೆರಳುತಿದ್ದರು. ಈ ವೇಳೆ ಕೆಲವು ಮಕ್ಕಳು ತಮ್ಮನ್ನು ಮನೆಗೆ ಡ್ರಾಪ್ ಮಾಡುವಂತೆ ಕೇಳಿದ್ದಾರೆ. ಮಕ್ಕಳನ್ನ ಡ್ರಾಪ್ ಮಾಡಿದ್ದಕ್ಕೆ ಮಕ್ಕಳ ಕಳ್ಳ ಎಂದು ತಿಳಿದುಕೊಂಡ ಗ್ರಾಮಸ್ಥರು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್​ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv