ಆನೇಕಲ್ ಪೊಲೀಸ್ರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ!

ಬೆಂಗಳೂರು: ಪರಿಸರ ದಿನಾಚರಣೆ ಹಿನ್ನಲೆ ಆನೇಕಲ್ ಪೊಲೀಸರಿಂದ ಪ್ರಶಂಸನೀಯ ಕಾರ್ಯ ವ್ಯಕ್ತವಾಗಿದೆ. ಆನೇಕಲ್’ನ ಜಿಗಣಿ ಬಳಿಯ ಹರಪನಹಳ್ಳಿ ಕೆರೆಯಲ್ಲಿ ಹೂಳೆತ್ತುವ ಕಾರ್ಯ ಮಾಡಿದ ಪೊಲೀಸ್ರು ಈ ಮೂಲಕ ಪರಿಸರ ಜಾಗೃತಿ ಮೂಡಿಸಿದ್ರು. ಈ ವೇಳೆ ಆನೇಕಲ್ ಉಪವಿಭಾಗ ಡಿಎಸ್ಪಿ ಉಮೇಶ್ ನೇತೃತ್ವದ ತಂಡ ಕೆರೆ ಹೂಳೆತ್ತುವ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ರು. ಆನೇಕಲ್ ಪೊಲೀಸ್ರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ  ಸಂಪರ್ಕಿಸಿ: contact@firstnews.tv