‘ಪಬ್‌-ಜಿ ಸೀಸನ್‌-4’ ಅಪ್‌ಡೇಟ್‌ನಲ್ಲಿ ಏನುಂಟು.. ಏನಿಲ್ಲ..?

ಇತ್ತೀಚೆಗೆ ಪಬ್​​ಜಿ ಅನ್ನೋ ಆನ್​ಲೈನ್​ ಗೇಮ್​ ಭಾರೀ ಕ್ರೇಜ್ ಸೃಷ್ಟಿಸಿದೆ. 2018 ರಲ್ಲಿ ಜಗತ್ತಿನಾದ್ಯಂತ ಹಲ್​ಚಲ್​ ಎಬ್ಬಿಸಿರುವ ಈ ಗೇಮ್‌, ಕೋಟ್ಯಂತರ ಜನರನ್ನ ಅಟ್ರ್ಯಾಕ್ ಮಾಡಿದೆ. ಈ ಪಬ್​​ಜಿ ಅನ್ನೋ ಯುದ್ಧಭೂಮಿ ಆಟ ಕಳೆದ ಮಾರ್ಚ್​​ 2018ರಿಂದ ಶುರುವಾಗಿದೆ. ಲಾಂಚ್​ ಆಗಿ ಕೇಲವೇ ತಿಂಗಳುಗಳಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿರುವುದರ ಜೊತೆಗೆ ಸಕ್ಸಸ್​ ಕೂಡ ಕಂಡಿದೆ. ಈಗಾಲೇ ಭಾರತದಲ್ಲಿ 10 ಕೋಟಿ ಮಂದಿ ಪಬ್​ಜಿ ಅನ್ನೋ ಆ್ಯಪ್​ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಜೊತೆಗೆ ವಿಶ್ವಾದಾದ್ಯಂತ 20 ಕೋಟಿ ಜನರು ಆ್ಯಪ್ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಪಬ್‌ಜಿಯ ಮುಡಿಗೆ ಮತ್ತೊಂದು ಗರಿಯೂ ಸೇರ್ಪಡೆಯಾಗಿದ್ದು, ಭಾರತದಲ್ಲಿ ‘ಗೂಗಲ್‌ ಪ್ಲೇ ಯೂಸರ್‌ ಚಾಯ್ಸ್‌ ಗೇಮ್‌ ಆಫ್‌ 2018’ ಪಡೆದುಕೊಂಡಿದೆ. ಅಲ್ಲದೇ 2018ರ ವಿಶ್ವದ ಬೆಸ್ಟ್ ಗೇಮ್‌ ಅನ್ನೋ ಖ್ಯಾತಿಗೂ ಪಬ್‌ಜಿ ಪಾತ್ರವಾಗಿದೆ.

ಇದೀಗ ಪಬ್​ಜಿ ಪ್ರಿಯರಿಗೆ ಮತ್ತೊಂದು ಖುಷಿಯನ್ನ ನೀಡಿದೆ. ಪಬ್‌ ಜಿ ತನ್ನ ಲೇಟೆಸ್ಟ್​ ವರ್ಸನ್​ ರಿಲೀಸ್ ಮಾಡಿದೆ. ಪಬ್​​ಜಿಯ ಸೀಸನ್-4 ಅನ್ನೋ ಮೊಬೈಲ್ ಪ್ಲೇಯರ್​ ಪರಿಚಯಿಸಿದೆ. ಐಪೋನ್‌ ಹಾಗೂ ಯಾವುದೇ ಆ್ಯಂಡ್ರಾಯಿಡ್ ಮೊಬೈಲ್​ನಲ್ಲಿ ಫ್ರೀಯಾಗಿ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ.

‘ಪಬ್​​ಜಿ ಮೊಬೈಲ್ ಸೀಸನ್-4’ನ ವಿಶೇಷತೆಗಳೇನು?
ಪಬ್​​ಜಿ ಮೊಬೈಲ್ ಸೀಜನ್-4’ ನವೆಂಬರ್ 20, 2018 ರಂದು ಲಾಂಚ್ ಆಗಿದೆ. ಇದು 0.9.5 ವರ್ಸನ್ ಹೊಂದಿದೆ.

  • ರಾಯಲ್​​ ಪೇಸ್​: ಪ್ರತಿ ಆಟಗಾರರಿಗೆ ಸ್ಪೆಷಲ್‌ ರಿವಾರ್ಡ್‌ ಪಾಯಿಂಟ್ಸ್ ಲಭ್ಯವಾಗಲಿದ್ದು, ಎಲೈಟ್ ಅಪ್​​​ಗ್ರೇಡ್‌ ಸಿಗಲಿದೆ.
  • ನ್ಯೂ ಹಾರ್ಡ್​ಕೋರ್​ ಮೂಡ್​: ಆಟದ ವೇಳೆ ಹೆಜ್ಜೆ ಗುರುತು, ಧ್ವನಿಗಳು ಮತ್ತು ಆಡಿಯೋ ಸೂಚನೆಗಳನ್ನ ರಿಮೂವ್ ಮಾಡಬಹುದು
  • ನ್ಯೂ ಫೀಚರ್ಸ್​: ಆಟಗಾರರು ಈಗ ನ್ಯೂ ಸ್ಕಿನ್, ಆಕ್ರಮಣಗಳು, ಶಸ್ತ್ರಾಸ್ತ್ರಗಳ ಆಕ್ಸೆಸ್ ಪಡೆಯಬಹುದು.
  • ನ್ಯೂ ಚಾಟ್​ ಸಿಸ್ಟಮ್: ಆಟಗಾರರು ತಮ್ಮ ಪಾರ್ಟನರ್​ ಜೊತೆ ಯುದ್ಧದಲ್ಲಿ ಗೆಲ್ಲುವ ಉದ್ದೇಶಕ್ಕೆ ಎರಡು ಭಾಷೆಗಳನ್ನ ಆಯ್ಕೆ ಮಾಡಿಕೊಳ್ಳುವ ಅವಕಾಶ
  • ಹೊಸ ಅಪ್‌ಡೇಟೆಡ್‌ ವರ್ಷನ್‌ನಲ್ಲಿ ಸ್ಕೂಟರ್‌ ಹಾಗೂ ಡೈನಾಮಿಕ್‌ ವೆದರ್‌ ನೋಡಬಹುದು.