ಹೆತ್ತವರನ್ನೇ ಕೊಲ್ಲಲು ಕಳ್ಳತನಕ್ಕೆ ಇಳಿದಿದ್ದ.. ಈಗೇನಾದ ಆರೋಪಿ?!

ಬೆಂಗಳೂರು: ಸೈಕೋಪಾತ್‌ ಕಳ್ಳನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆದಿತ್ಯ ಶರತ್ (24) ಬಂಧಿತ ಆರೋಪಿ. ಜುಲೈ 6ರಂದು ಬೈಕ್ ಒಂದನ್ನ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದ. ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಬಂಧಿತ ಆರೋಪಿ ಸೈಕೋಪಾತ್‌ ಎಂದು ತಿಳಿದು ಬಂದಿದೆ.
ಗರ್ಲ್‌ಫ್ರೆಂಡ್ ಚೇಂಜ್ ಮಾಡ್ತಿದ್ದ ಆರೋಪಿಗೆ, ಬುದ್ಧಿ ಹೇಳಿದ್ದ ಪೋಷಕರು..?
ಬಂಧಿತ ಆರೋಪಿ ಶರತ್ ಕಾಮಾಕ್ಷಿಪಾಳ್ಯ ಬಳಿಯ ವೃಷಭಾವತಿನಗರದ ನಿವಾಸಿ. ಡಿಪ್ಲೋಮಾ ಪದವಿ ಪಡೆದಿದ್ದ ಆರೋಪಿ ಶರತ್, ಹಲವು ಹುಡುಗಿಯರನ್ನ ತನ್ನ ಗರ್ಲ್ ಫ್ರೆಂಡ್ಸ್ ಅಂತ ಮನೆಯಲ್ಲಿ ಹೇಳ್ತಿದ್ದ. ಪದೇ ಪದೇ ಗೆಳೆತಿಯರನ್ನ ಕೂಡಾ ಬದಲಿಸ್ತಿದ್ದನಂತೆ. ಮಗನ ವರ್ತನೆಗೆ ಬೇಸತ್ತು ಪೊಷಕರು ಬುದ್ದಿ ಕೂಡಾ ಹೇಳಿದ್ರು. ಬಳಿಕ ಮದುವೆಯಾಗು ಅಂತಾನೂ ಪೊಷಕರು ಮನೆಯಲ್ಲಿ ಒತ್ತಡ ಹಾಕಲು ಶುರು ಮಾಡಿದ್ದಾರೆ. ಪೋಷಕರ ಒತ್ತಡ ತಾಳಲಾರದೇ ಪೋಷಕರನ್ನೇ ಆರೋಪಿ ಶರತ್ ಕೊಲ್ಲಲು ನಿರ್ಧರಿಸಿದ್ದ ಎನ್ನಲಾಗಿದ್ದು, ಅದರಂತೆ ಆರೋಪಿ ಆದಿತ್ಯ ಶರತ್ ಊಟದಲ್ಲಿ ವಿಷ ಬೆರೆಸಿ ಹೆತ್ತವರಿಗೆ ಕೊಲ್ಲಲು ನೋಡಿದ್ದಾನೆ. ಈ ವಿಷಯ ತಿಳಿದ ಪೊಷಕರು ಮನೆಯಿಂದ ಹೊರಹಾಕಿದ್ದರು. ಅಲ್ಲದೇ ಮಗನ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕಂಪ್ಲೇಟ್ ಕೂಡಾ ದಾಖಲಿಸಿದ್ರು.

ಹೆತ್ತವರನ್ನ ಕೊಲ್ಲಲು ಕಳ್ಳತನಕ್ಕೆ ಇಳಿದ ಸೈಕೋಪಾತ್..!
ಹೆತ್ತವರನ್ನ ಕೊಲ್ಲಲು ಆರೋಪಿ ಶರತ್ ಕಳ್ಳತನಕ್ಕೆ ಇಳಿದಿದ್ದ ಎನ್ನಲಾಗಿದೆ. ಮನೆಯಿಂದ ಹೊರ ಬಂದ ಬಳಿಕ ಆರೋಪಿ ಶರತ್, ರಾಯಲ್ ಎನ್​​ಫೀಲ್ಡ್ ಬೈಕ್‌ಗಳನ್ನೇ ಟಾರ್ಗೆಟ್ ಮಾಡಿ‌ಕದಿಯುತ್ತಿದ್ದ. ಪೋಷಕರು ಹೊರಹಾಕಿದ ಕೋಪಕ್ಕೆ ಡಿಪ್ರೆಷನ್‌ಗೂ ತೆರಳಿದ್ದ ಎನ್ನಲಾಗಿದೆ. ನಂತರ ಪೋಷಕರನ್ನು ಕೊಲ್ಲಲೇ ಬೇಕು ಅಂತಾ ಡಿಸೈಡ್ ಮಾಡಿ, ಸಾಯಿಸುವುದು ಹೇಗೆ ಅಂತಾ ಆನ್ಲೈನ್‌ನಲ್ಲಿ ಸರ್ಚ್ ಮಾಡಿದ್ದಾನೆ. ಮನೆಯ ವಾಟರ್ ಟ್ಯಾಂಕ್‌ಗೆ ವಿಷ ಬೆರೆಸಿದ್ದಾನೆ, ಈ ವಿಷ್ಯ ಹೆತ್ತವರಿಗೆ ತಿಳಿಯುತ್ತದೆ. ಕಡೆಗೆ ಗುಂಡಿಟ್ಟು ಕೊಲ್ಲುವುದೇ ಸೂಕ್ತ ಅಂತಾ ಆರೋಪಿ ನಿರ್ಧರಿಸುತ್ತಾನೆ. ಬಿಹಾರ ಮೂಲದ ತನ್ನ ಡಿಪ್ಲೋಮಾ ಕ್ಲಾಸ್‌ಮೆಟ್ ಮೂಲಕ ಪಿಸ್ತೂಲ್ ಹಾಗೂ ಗುಂಡುಗಳನ್ನ ಕೂಡ ಈತ ಖರೀದಿಸಿದ್ದನಂತೆ. ನಂತರ ಬಸವೇಶ್ವರ ಠಾಣಾ ವ್ಯಾಪ್ತಿಯಲ್ಲಿ ರೈಫಲ್ ಸಮೇತ್ ಬೈಕ್‌ಗಳನ್ನ ಕದಿಯುತ್ತಿದ್ದ ವೇಳೆ ಬಸವೇಶ್ವರ್ ಠಾಣೆ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ.

ವಿಚಾರಣೆ ವೇಳೆ ಶರತ್​ ಹಲವು ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ. ಈತ ಒಬ್ಬ ಮೆಕ್ಯಾನಿಕಲ್ ಇಂಜೀನಿಯರ್ ಆಗಿದ್ದು, ಬೈಕ್ ಕಳ್ಳತನ ಮಾಡುತ್ತಿದ್ದ. ಬೈಕ್ ಕದಿಯುವ ಮುನ್ನ ಬೈಕ್ ನಂಬರ್ ಪ್ಲೇಟ್ ಪೋಟೋ ತೆಗೆದುಕೊಂಡು ಹೋಗುತ್ತಿದ್ದ. ನಂತರ ಬೈಕ್​ ನಂಬರ್ ತೆಗೆದುಕೊಂಡು ಆರ್​ಟಿಓಗೆ ಹೋಗಿ ಬೈಕ್ ಮಾಲೀಕರ ಹೆಸರು ಪತ್ತೆ ಹಚ್ಚುತ್ತಿದ್ದ. ನಂತರ ಸೈಬರ್ ಸೆಂಟರ್​ಗೆ ತೆರಳಿ ಬೈಕ್ ಮೇಲೆ ನಕಲಿ ಐಡಿ ಸೃಷ್ಠಿ ಮಾಡುತ್ತಿದ್ದ. ಬೈಕ್​ನ ನಕಲಿ ಐಡಿ ರೆಡಿಯಾಗ್ತಿದ್ದಂತೆ ಬೈಕ್ ಕದ್ದು ಎಸ್ಕೇಪ್ ಆಗುತ್ತಿದ್ದ ಎಂದು ತಿಳಿದು ಬಂದಿದೆ.

ಇನ್ನು ಸೈಕೋಪಾತ್ ಶರತ್ ವಿರುದ್ದ ಕೊಲೆಯತ್ನ, ಕಳ್ಳತನ, ಮೋಟಾರ್ ವಾಹನ ಕಾಯ್ದೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ದೂರು ದಾಖಲಾಗಿದ್ದು, ಇನ್ನು ಪೊಲೀಸ್ ವಿಚಾರಣೆ ವೇಳೆ ಆರೋಪಿ ತಂದೆ-ತಾಯಿಯನ್ನ ಕೊಲ್ಲಲ್ಲುವುದಕ್ಕಾಗಿ ಗುಂಡು ಖರಿದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಒಂದು ಪಿಸ್ತೂಲ್ 10 ಜೀವಂತ ಗುಂಡು ಹಾಗೂ 9 ಬೈಕ್‌ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv