PSI ಪ್ರಶಿಕ್ಷಣಾರ್ಥಿಗಳ 41ನೇ ತಂಡದ ನಿರ್ಗಮನ ಪಥ ಸಂಚಲನ

ಮೈಸೂರು: ನಗರದಲ್ಲಿರುವ ಪೊಲೀಸ್ ಅಕಾಡೆಮಿ ಮೈದಾನದಲ್ಲಿ ಇಂದು ಆರಕ್ಷಕ ಉಪನಿರೀಕ್ಷಕ ಪ್ರಶಿಕ್ಷಣಾರ್ಥಿಗಳ(PSI) 41ನೇ ತಂಡದ ನಿರ್ಗಮನ ಪಥಸಂಚಲನ ನಡೆಯಿತು. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಗೃಹ ಸಚಿವ ಎಂ.ಬಿ ಪಾಟೀಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಮೈಸೂರಿನ 12 ಮಂದಿ, ಚಾಮರಾಜನಗರದ 3, ಹಾಸನದ 12, ಮಂಡ್ಯದ 7 ಹಾಗೂ ಕೊಡಗಿನ ಇಬ್ಬರು ಸೇರಿದಂತೆ ರಾಜ್ಯದ ಒಟ್ಟು 287 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದುಕೊಂಡಿದ್ದಾರೆ.