ಕುಣಿಗಲ್​ನಲ್ಲಿ ಅಂಗಡಿ, ಕಚೇರಿಯಲ್ಲಿ ಕಳ್ಳತನ

ತುಮಕೂರು: ನಿನ್ನೆ ತುಮಕೂರು ನಗರದಲ್ಲಿ ಸರಣಿ ಕಳ್ಳತನ ನಡೆದ ಬೆನ್ನಲ್ಲೆ ಕುಣಿಗಲ್​ನಲ್ಲಿ ಅಂಗಡಿ ಮತ್ತು ತಿರುಮಲ ಎಂಟರ್​ಪ್ರೈಸಸ್​ ಕಚೇರಿಯಲ್ಲಿ ಕಳ್ಳತನ ನಡೆದಿದೆ. ಪಟ್ಟಣದ ಪ್ರಾವಿಷನ್​ ಸ್ಟೋರ್​ನಲ್ಲಿ 2 ಸಾವಿರ ಹಣ ಸೇರಿದಂತೆ ಅಂಗಡಿಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಅಲ್ಲದೇ ಪ್ರಾವಿಷನ್​ ಸ್ಟೋರಿನ ಪಕ್ಕದಲ್ಲಿದ್ದ ತಿರುಮಲ ಕಚೇರಿಯಲ್ಲಿ ದಾಖಲೆ ಕಾಗದ ಪತ್ರಗಳನ್ನು ಕಳವು ಮಾಡಿದ್ದಾರೆ. ಜಿಲ್ಲೆಯಲ್ಲಿ ವಿವಿಧೆಡೆ ಕಳ್ಳತನ ನಡೆದಿದ್ದು, ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಈ ಕುರಿತು ಕುಣಿಗಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv