ಪ್ರೊಟೀನ್ ಪೌಡರ್ ಸೇವಿಸ್ತೀರಾ? ಹಾಗಿದ್ರೆ ಸ್ವಲ್ಪ ಹುಷಾರ್​​​​​​​​​​​​​​​​​​​​​..!

ಈಗಿನ ಹೈಫೈ ಜಮಾನದಲ್ಲಿ ಅನೇಕರಿಗೆ ದೇಹದ ತೂಕ ಕಡಿಮೆ ಮಾಡೋದು ಅಥವಾ ಹೆಚ್ಚು ಮಾಡೋದರ ಕುರಿತು ಚಿಂತೆ ಕಾಡುತ್ತಿರುತ್ತೆ. ಸಭೆ ಸಮಾರಂಭಗಳಲ್ಲಿ ಅಟೆಂಡ್​​ ಮಾಡೋವಾಗ ಬೇರೆಯವರು ನಮ್ಮ ದೇಹ ನೋಡಿ ಏನಂದುಕೊಳ್ಳುತ್ತಾರೋ ಅನ್ನೋ ಮುಜುಗರ ಬೇರೆ.. ವೈಟ್​ ಗೈನ್​, ವೈಟ್​ ಲಾಸ್​ ಆಗ್ಬೇಕಾದರೆ ತುಂಬಾ ಜನರು ಪ್ರೋಟಿನ್​ ಪೌಡರ್​ಗಳ ಮೊರೆ ಹೋಗ್ತಾರೆ. ಜಿಮ್​ಗೆ ಹೋಗಿ ವರ್ಕೌಟ್​ ಮಾಡೋರು ಕೂಡ ಮಸಲ್ಸ್​ ಗೈನ್​ ಮಾಡ್ಕೋಳ್ಳೋದಿಕ್ಕೂ ಇಂತಹ ಪೌಡರ್​ಗಳನ್ನು ಬಳಸುತ್ತಾರೆ. ಮೊದಮೊದಲಿಗೆ ಈ ಪೌಡರ್​ಗಳು ಒಳ್ಳೆಯ ರಿಸಲ್ಟ್​​​ ಕೊಟ್ಟರೂ ಸಮಯ ಕಳೆದಂತೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಷ್ಟಕ್ಕೂ ಪ್ರೊಟೀನ್​​​​​​​ ಪೌಡರ್​​​ಗಳಿಂದಾಗೋ ಸೈಡ್​​ ಎಫೆಕ್ಟ್​​​ಗಳೇನು ಗೊತ್ತಾ?
ಪ್ರೊಟೀನ್​ ಪೌಡರ್​ಗಳ ಸೇವನೆಯಿಂದಾಗುವ ಐದು ದುಷ್ಪರಿಣಾಮಗಳು:

1. ಮುಖದ ಮೇಲೆ ಮೊಡವೆಗಳು ಹೆಚ್ಚಾಗುತ್ತದೆ.
ಪ್ರೊಟೀನ್​ ಪೌಡರ್​ಗಳ ಅತಿಯಾದ ಸೇವನೆಯಿಂದ ಕರುಳಿನಲ್ಲಿ ಉರಿಯೂತ ಉಂಟಾಗುತ್ತದೆ. ಜೊತೆಗೆ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

2. ಪೌಷ್ಠಿಕಾಂಶ ಸಂಯೋಜನೆಯಲ್ಲಿ ಅಸಮತೋಲನ.
ನಾವು ಪ್ರತಿನಿತ್ಯ ಸೇವಿಸುವಂತಹ ಮೀನು, ಮಾಂಸ ಹಾಗೂ ಮೊಟ್ಟೆಗಳಲ್ಲಿ ಪೌಷ್ಟಿಕಾಂಶ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದು ನೈಸರ್ಗಿಕ ಫುಡ್​​ ಆಗಿರೋದ್ರಿಂದ ಆರೋಗ್ಯಕ್ಕೆ ಒಳ್ಳೆಯದು. ಆದರೆ ಪ್ರೊಟೀನ್​ ಪೌಡರ್​ಗಳಲ್ಲಿ ಕೆಮಿಕಲ್​ಗಳನ್ನು ಬಳಸುವುದರಿಂದ ಅಧಿಕ ಪೌಷ್ಟಿಕಾಂಶವಿರುತ್ತದೆ. ಇದು ದೇಹದಲ್ಲಿ ಅಸಮತೋಲನವನ್ನುಂಟು ಮಾಡುತ್ತದೆ. ಹಾಗಾಗಿ ಪ್ರೊಟೀನ್​ ಪೌಡರ್​ಗಳನ್ನು ಮಿತವಾಗಿ ಬಳಸಬೇಕು.

3. ಕರುಳಿನ ಸಮಸ್ಯೆ ಉಂಟಾಗಬಹುದು.
ಒಡೆದ ಹಾಲು ಅಥವಾ ಟೆಟ್ರಾ ಪ್ಯಾಕ್​ ಮೂಲಕ ಸಂಗ್ರಹಿಸಿಟ್ಟ ಹಾಲು ಸೇವಿಸುವುದರಿಂದ ಅದರಲ್ಲಿರುವ ಲ್ಯಾಕ್ಟೋಫೆರಿನ್​​​​​​​​​​​​​​​​​​​​​​​ನಂತಹ ಬ್ಯಾಕ್ಟೀರಿಯಾಗಳು ಕರುಳಿನ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದರಿಂದ ಹೊಟ್ಟೆಯುಬ್ಬರ ಹಾಗೂ ಗ್ಯಾಸ್​ ಟ್ರಬಲ್​ನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

4. ಪ್ರೊಟೀನ್​​​​​​ ಪೌಡರ್​ಗಳು ವಿಷಕಾರಿ
ತಜ್ಞರ ಸಲಹೆಯ ಪ್ರಕಾರ ಬಾಡಿ ಬಿಲ್ಡರ್ಸ್​ಗಳು ಹೆಸರಾಂತ ಕಂಪನಿಗಳ ಪ್ರೊಟೀನ್​ ಪೌಡರ್​​​​​​​​​​​​​​​​​​​​​ಗಳನ್ನು ಬಳಸುವುದು ಉತ್ತಮ. ಲೋಕಲ್​ ಕಂಪನಿಗಳು ಸೀಸ, ಕ್ಯಾಡ್ಮಿಯಮ್, ಆರ್ಸೆನಿಕ್ ಮತ್ತು ಪಾದರಸದಂತಹ ಹೆಚ್ಚು ವಿಷಕಾರಿ ಲೋಹಗಳನ್ನು ಬಳಸಿ ಪ್ರೋಟೀನ್​ ಪೌಡರ್​​​​​​​​​​​​​​​​​​​​​​​​ಗಳನ್ನು ಉತ್ಪಾದಿಸುತ್ತದೆ. ಇದರಿಂದಾಗಿ ತಲೆನೋವು, ಆಯಾಸ, ಮಲಬದ್ಧತೆ ಮತ್ತು ಸ್ನಾಯುಗಳು ಮತ್ತು ಕೀಲು ನೋವು ಕಾಣಿಸಿಕೊಳ್ಳುತ್ತದೆ.

5. ದೇಹದಲ್ಲಿ ಇನ್ಸುಲಿನ್​ ಮಟ್ಟವನ್ನು ಹೆಚ್ಚಿಸುತ್ತದೆ.
ಜಿಮ್​ನಲ್ಲಿ ವರ್ಕ್ ಔಟ್​ ಮಾಡಿದ ನಂತರ ಪ್ರೊಟೀನ್​ ಪೌಡರ್​ ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್​ನ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಸುಮಾರು ಪ್ರಯೋಜನಗಳಾಗಿವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅಕ್ಕಿ ಅಂಶ ಹೊಂದಿದ ಪ್ರೊಟೀನ್​ ಪೌಡರ್ ಸೇವಿಸುವುದರಿಂದ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ಕಟ್ಟು ಮಸ್ತಾದ ಮಸಲ್ಸ್​ ಕೂಡ ಬೆಳೆಯುತ್ತದೆ.

ಏನೇ ಇರಲಿ ಪ್ರೊಟೀನ್​ ಪೌಡರ್​ ಸೇವಿಸುವ ಮುನ್ನ ಸ್ವಲ್ಪ ಹುಷಾರಾಗಿರಿ. ಕಡಿಮೆ ರೇಟ್​​​​ಗೆ ಸಿಗುತ್ತೆ ಅಂತಾ ಕಳಪೆ ಮಟ್ಟದ ಪೌಡರ್​ ಸೇವಿಸುವ ಬದಲು ಅಧಿಕೃತ ಕಂಪನಿಗಳ ಉತ್ತಮ ಗುಣಮಟ್ಟದ ಪೌಡರ್​ಗಳನ್ನು ಮಿತವಾಗಿ ಉಪಯೋಗಿಸಿದರೆ ಆರೋಗ್ಯದ ದೃಷ್ಠಿಯಿಂದ ಉತ್ತಮ. ಇದರ ಜೊತೆಗೆ ಆದಷ್ಟೂ ನ್ಯಾಚುರಲ್​ ಪೌಷ್ಠಿಕಾಂಶಗಳನ್ನೇ ಬಳಸಿ. ಇದು ನಿಮ್ಮನ್ನು ಫಿಟ್​ ಌಂಡ್​ ಹೆಲ್ದಿಯಾಗಿರುವಂತೆ ಮಾಡುತ್ತದೆ.

ವಿಶೇಷ ಬರಹ- ಶ್ವೇತಾ ಪೂಜಾರಿ

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಸಿ : contact@firstnews.tv