ಶಾಮನೂರು ಶಿವಶಂಕರಪ್ಪ ಪುತ್ರನ ಮಾಲ್​ನಲ್ಲಿ ಹಿಂದಿ ಸಿನಿಮಾ ಪ್ರದರ್ಶನ, ಪ್ರತಿಭಟನೆ

ದಾವಣಗೆರೆ: ನಗರದಲ್ಲಿ ನವೆಂಬರ್​​ ಒಂದರಿಂದ ಇಂದಿನವರೆಗೂ ಹಿಂದಿ ಚಿತ್ರ ಪ್ರದರ್ಶನ ಆಗುತ್ತಿದ್ದನ್ನು ಖಂಡಿಸಿ ಕರ್ನಾಟಕ ಏಕತಾ ವೇದಿಕೆ ಕಾರ್ಯಕರ್ತರು ಎಸ್​ಎಸ್​ ಮಾಲ್​​​ಗೆ ಮುತ್ತಿಗೆ ಹಾಕಿದರು. ದಾವಣಗೆರೆಯ ಶಾಮನೂರು ರಸ್ತೆಯಲ್ಲಿರುವ ಎಸ್​​ಎಸ್​​ ಮಾಲ್​​​, ಶಾಮನೂರು ಶಿವಶಂಕರಪ್ಪ ಪುತ್ರ ಗಣೇಶ್​​ ಒಡೆತನಕ್ಕೆ ಸೇರಿದೆ. ಮಾಲ್​ನಲ್ಲಿ ಹಿಂದಿ ಚಿತ್ರ ಪ್ರದರ್ಶನ ಆಗುತ್ತಿರುವುದನ್ನು ಖಂಡಿಸಿ ಏಕತಾ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಿ, ಸಿನಿಮಾವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು. ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಮಾಲ್​​ನ ಮ್ಯಾನೇಜರ್​​ ಹಿಂದಿ ಸಿನಿಮಾ ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. ಮಾಲ್​ನಲ್ಲಿ ಇನ್ಮುಂದೆ ಕನ್ನಡ ಸಿನಿಮಾಗಳನ್ನು ಮಾತ್ರ ಪ್ರದರ್ಶಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv