ಬಿಬಿಎಂಪಿ ಕಛೇರಿ ಮುಂದೆ ಗುತ್ತಿಗೆದಾರರಿಂದ ಪ್ರೊಟೆಸ್ಟ್

ಬೆಂಗಳೂರು: ಕಳೆದ ಐದು ತಿಂಗಳಿಂದ ಬಿಬಿಎಂಪಿ ಬಿಲ್​ಗಳನ್ನು ಪಾವತಿ ಮಾಡದ ಹಿನ್ನೆಲೆ ಬಿಬಿಎಂಪಿ ಕಛೇರಿ ಮುಂದೆ ಗುತ್ತಿಗೆದಾರರು ಮತ್ತು ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಜನವರಿಯಿಂದ ಮೇ ವರೆಗೆ ಸುಮಾರು ಐದು ತಿಂಗಳ ಬಿಲ್​ಗಳು ಪಾವತಿಯಾಗಿಲ್ಲ. ಕಳೆದ ಆಗಸ್ಟ್‌ನಿಂದ ಡಿಸೆಂಬರ್​ ವರೆಗಿನ ಶೇ. 10ರಷ್ಟು ಬಿಲ್​ನ ಮೊತ್ತವೂ ಬಿಬಿಎಂಪಿ ಬಾಕಿ ಉಳಿಸಿಕೊಂಡಿದೆ. ಲೀಡ್​ ಮತ್ತು ಟೋಲ್​ ಬಿಲ್​ಗಳು ಈವರೆಗೆ ಜಾರಿಯಾಗಿಲ್ಲ. ಸೇವಾ ತೆರಿಗೆ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೇ ಇಂಧನ ಮತ್ತು ದುರಸ್ಥಿ ವೆಚ್ಚಗಳನ್ನು ಹೆಚ್ಚಿಸಿಲ್ಲ. ಈ ಸಮಸ್ಯೆಗಳನ್ನು ಅದೆಷ್ಟೋ ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹೇಳಿದರು ಯಾವುದೇ ಪ್ರಯೋಜನವಾಗಿಲ್ಲ ಅಂತಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು. ಇದೇ ವೇಳೆ ಮೇಯರ್​ಗೆ ಜವಾಬ್ದಾರಿ ಇಲ್ಲ. ಅವನ್ನೊಬ್ಬ ಎಸ್ಕೆಪ್​ ಮ್ಯಾನ್​ ಅಂತಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv