ಅವ್ರು ಸಿಎಂಗೇ ₹600 ಮನಿ ಆರ್ಡರ್ ಮಾಡಿದ್ರು.. ಯಾಕೆ…?

ರಾಯಚೂರು: ಸರ್ಕಾರ ನೀಡುತ್ತಿರುವ ವೃದ್ಧಾಪ್ಯ ವೇತನ, ವಿಧವಾ ವೇತನ (ಪಿಂಚಣಿ)ಯನ್ನು ಮುಖ್ಯಮಂತ್ರಿಗಳಿಗೆ ಮನಿ ಆರ್ಡರ್ ಮಾಡುವ ಮೂಲಕ ರಾಯಚೂರಲ್ಲಿ ಮಹಿಳೆಯರು ಸರ್ಕಾರದ ವಿರುದ್ಧ ವಿಶಿಷ್ಟ ರೀತಿಯಲ್ಲಿ ಆಂದೋಲನ ಮಾಡಿದ್ದಾರೆ. ಸರ್ಕಾರ ಪ್ರತಿ ತಿಂಗಳು ನೀಡುತ್ತಿರುವ 600 ರೂಪಾಯಿ ವೃದ್ಧಾಪ್ಯ ಹಾಗೂ ವಿಧವಾ ವೇತನವನ್ನು ಹೆಚ್ಚಳ ಮಾಡಬೇಕೆಂದು ನವ ಜೀವನ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಟಿಪ್ಪು ಸುಲ್ತಾನ್ ಗಾರ್ಡನ್​ನಿಂದ ಹೆಡ್ ಪೊಸ್ಟ್ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ 40ಕ್ಕೂ ಹೆಚ್ಚು ಮಹಿಳೆಯರು, ವೃದ್ಧೆಯರು ಸಿಎಂ ಕುಮಾರಸ್ವಾಮಿಗೆ ತಮ್ಮ ಒಂದು ತಿಂಗಳ ಪಿಂಚಣಿ ಹಣವನ್ನು ಮನಿ ಆರ್ಡರ್ ಮಾಡಿದ್ದಾರೆ. ಬೇರೆ ರಾಜ್ಯದ ಸರ್ಕಾರಗಳು ಪ್ರತಿ ತಿಂಗಳು 2000 ಸಾವಿರ ಹಣ ನೀಡುತ್ತಿವೆ. ಆದರೆ ನಮ್ಮಲ್ಲಿ ಕೇವಲ 600 ರೂಪಾಯಿ ನೀಡಲಾಗುತ್ತಿದೆ ಅಂದರೆ ಪ್ರತಿ ದಿನಕ್ಕೆ 20 ರೂಪಾಯಿ ಲೆಕ್ಕಹಾಕಿ ಸರ್ಕಾರ ಪಿಂಚಣಿ ನೀಡುತ್ತಿದೆ. ಇದರಲ್ಲಿ ನಾವು ಬದುಕಲು ಸಾಧ್ಯವೇ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಪಿಂಚಣಿ ಹಣವನ್ನು ಹೆಚ್ಚಳ ಮಾಡಬೇಕೆಂದು ಮಹಿಳೆಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv