ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಷ್ಕರ

ಬಳ್ಳಾರಿ: ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್​​ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 16ರಂದು ಬ್ಯಾಂಕ್ ಮುಷ್ಕರ ಹಮ್ಮಿಕೊಳ್ಳಲಾಗಿದೆ ಅಂತಾ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಎಂ ರಾಮರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಎಲ್ಲ ನೌಕರರಿಗೆ ಹೈಕೋರ್ಟ್ ಆದೇಶದಂತೆ ಪಿಂಚಣಿ ನೀಡಬೇಕು ಹಾಗೂ ಭವಿಷ್ಯ ನಿಧಿ ವಿಚಾರಣೆ ವಿರುದ್ಧ ಬ್ಯಾಂಕ್ ಸಲ್ಲಿಸಿದ ರಿಟ್ ಅರ್ಜಿಯನ್ನು ಮರಳಿ ಪಡೆಯುವಂತೆ ಒತ್ತಾಯಿಸಿದರು.ರಾಜ್ಯದ ಎಲ್ಲ ಗ್ರಾಮೀಣ ಬ್ಯಾಂಕ್​​​​​​​​ಗಳನ್ನು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್​​​ನಲ್ಲಿ ವಿಲೀನ ಮಾಡುವ ಬಗ್ಗೆ ಒಪ್ಪಿಗೆ ಸೂಚಿಸಬೇಕು ಎಂದರು. ಈ ಬ್ಯಾಂಕ್ ಒಟ್ಟು ವ್ಯವಹಾರದಲ್ಲಿ ಹಾಗೂ ಲಾಭದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಆದರೆ ಬ್ಯಾಂಕ್ ಆಡಳಿತ ತನ್ನ ಸಿಬ್ಬಂದಿಗಳಿಗೆ ಕಾಯ್ದೆ ಬದ್ಧವಾಗಿ ನೀಡಬೇಕಾದ ಸವಲತ್ತುಗಳನ್ನು ನೀಡುತ್ತಿಲ್ಲ ಮತ್ತು ಹೈಕೋರ್ಟ್ ಆದೇಶವನ್ನು ಬ್ಯಾಂಕ್ ಆಡಳಿತ ಮಂಡಳಿ ಉಲ್ಲಂಘಿಸಿದೆ ಎಂದು ಎಂ.ರಾಮರಾವ್ ಆರೋಪಿಸಿದರು.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂರ್ಪಕಿಸಿ:contact@firstnews.tv