ನಮ್ಮೂರಲ್ಲಿ ಹೈಸ್ಕೂಲ್ ಬೇಕೇ ಬೇಕು ಅಂತಾ ವಿದ್ಯಾರ್ಥಿಗಳ ಪ್ರೊಟೆಸ್ಟ್​

ಬಳ್ಳಾರಿ: ನಮ್ಮ ಊರಿನಲ್ಲಿ ಹೈಸ್ಕೂಲ್ ಇಲ್ಲ. ಇದಕ್ಕಾಗಿ 4 ವರ್ಷದಿಂದ ಹೋರಾಟ ಮಾಡ್ತಿದ್ದೇವೆ. ಹೈಸ್ಕೂಲ್ ಇಲ್ಲದಿರುವ ಕಾರಣಕ್ಕೆ ಕೆಲವರು ಶಿಕ್ಷಣವನ್ನೇ ಮೊಟಕುಗೊಳಿಸಿದ್ದಾರೆ. ಹೀಗಾಗಿ ನಮ್ಮೂರಿಗೆ ಹೈಸ್ಕೂಲ್ ಬೇಕೇ ಬೇಕು ಅಂತಾ ಒತ್ತಾಯಿಸಿ ಕಂಪ್ಲಿ ತಾಲೂಕಿನ‌ ಮೆಟ್ರಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳು ತರಗತಿ ಬಹಿಷ್ಕರಿಸಿ ಶಾಲೆ ಮುಂದೆಯೇ ಧರಣಿ ನಡೆಸಿದರು.

ಮಕ್ಕಳ ಈ ಧರಣಿ ಹೋರಾಟಕ್ಕೆ ಪೋಷಕರು ಕೂಡ ಸಾಥ್ ನೀಡಿದರು‌. ನಮ್ಮೂರಲ್ಲಿ ಖಾಸಗಿ ಪ್ರೌಢಶಾಲೆ ಇದೆ. ಅಲ್ಲಿ ದುಬಾರಿ ಫೀಸ್ ಕೊಟ್ಟು ಓದುವಷ್ಟು ಶಕ್ತಿ ನಮಗಿಲ್ಲ. ಕೆಲ ವಿದ್ಯಾರ್ಥಿಗಳು ಕಂಪ್ಲಿ ಸೇರಿದಂತೆ ಹಲವೆಡೆ ಹೋಗಿ ಹೈಸ್ಕೂಲ್ ಓದುತ್ತಾರೆ. ಆದ್ರೆ ಆರ್ಥಿಕ ಸಮಸ್ಯೆ ಇರುವ ಪೋಷಕರಿಗೆ ಊರಿನಲ್ಲಿ ಹೈಸ್ಕೂಲ್ ಇಲ್ಲದಿರುವ ಕಾರಣದಿಂದ ತಮ್ಮ ಮಕ್ಕಳನ್ನು ಮುಂದೆ ಓದಿಸಲಾಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಮೆಟ್ರಿ ಗ್ರಾಮದಲ್ಲಿ ಹೈಸ್ಕೂಲ್ ಆರಂಭಿಸಬೇಕು ಅಂತಾ ವಿದ್ಯಾರ್ಥಿಗಳು ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv