ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧಿಸುವಂತೆ ಪ್ರೊಟೆಸ್ಟ್​

ಚಾಮರಾಜನಗರ: ಬಂಡೀಪುರದಲ್ಲಿ ರಾತ್ರಿ ಸಂಚಾರವನ್ನ ನಿಷೇಧಿಸುವಂತೆ ಆಗ್ರಹಿಸಿ, ಪರಿಸರವಾದಿಗಳು, ವನ್ಯಜೀವಿ ಉತ್ಸಾಹಿಗಳು, ಸ್ಥಳೀಯರು, ರೈತರು, ವಿದ್ಯಾರ್ಥಿಗಳು, ಮದ್ದೂರು ಗೇಟ್​ ಬಳಿ  ಪ್ರತಿಭಟನೆ ನಡೆಸಿದ್ರು.
ಕಾಡಿಗೆ ನಾಡಿನ ಹಂಗಿಲ್ಲ. ಆದರೆ ನಾಡಿಗೆ ಕಾಡಿನ ಹಂಗಿದೆ. ಬಂಡೀಪುರ ಉಳಿಸಿ. ಎಂಬ ನಾಮ ಫಲಕಗಳನ್ನ ಹಿಡಿದು, ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಬೆಂಗಳೂರು, ಮೈಸೂರು, ಕೊಡಗು ಮತ್ತು ವೈಲ್ಡ್​ ವೃತ್ತಿಪರರು ಕೂಡಾ ಭಾಗವಹಿಸಿದ್ರು.

ಬಂಡೀಪುರದಲ್ಲಿ  ರಾತ್ರಿ ವಾಹನಗಳ ಸಂಚಾರದಿಂದ ಮುಗ್ಧ ಜೀವಿಗಳು ಪ್ರಾಣ ಕಳೆದುಕೊಳ್ಳುತ್ತವೆ. ಆದ್ರಿಂದ ರಾತ್ರಿ ವೇಳೆ ವಾಹನಗಳ ಸಂಚಾರ ನಿಲ್ಲಿಸಬೇಕು ಎಂದು ಹಲವು ದಿನಗಳಿಂದ ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸುತ್ತಲೇ ಬರುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv