ಪ್ರೌಢಶಾಲೆ ಹೆಡ್​ಮಾಸ್ಟರ್​​ ವರ್ಗಾವಣೆ ಮಾಡದಂತೆ ಪ್ರತಿಭಟನೆ

ಶಿರಸಿ: ಇಲ್ಲಿನ ಗಣೇಶನಗರ ಸರ್ಕಾರಿ ಪ್ರೌಢಶಾಲೆಯ ಹೆಡ್​ಮಾಸ್ಟರ್​​ರನ್ನು ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಶಾಲೆಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಸೇರಿ ಎಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಎಸಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈಗಿರುವ ಹೆಡ್​ಮಾಸ್ಟರ್​​  ಎಂ.ಹೆಚ್. ನಾಯಕ್ ಚೆನ್ನಾಗಿ ಪಾಠ ಮಾಡುತ್ತಿದ್ದು, ಹಲವಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾಕಿರಣವಾಗಿದ್ದಾರೆ. ಪ್ರೌಢಶಾಲೆಯ ಫಲಿತಾಂಶ ವರ್ಷದಿಂದ ವರ್ಷಕ್ಕೆ ಉತ್ತಮವಾಗುತ್ತಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಶಿಕ್ಷಕರಿಗೆ ಶಿಕ್ಷೆಯ ರೂಪದಲ್ಲಿ ಖಡ್ಡಾಯ ವರ್ಗಾವಣೆಯನ್ನು ಮಾಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಅದೇ ರೀತಿ ಈ ಪ್ರೌಢಶಾಲೆ ಹುತ್ಗಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದು, 2009ರಿಂದ ಬಿ ವಲಯದ ಗ್ರಾಮೀಣ ಪ್ರದೇಶದ ಶಾಲೆಯನ್ನು ಎ ವಲಯವನ್ನಾಗಿ ಬದಲಾಯಿಸಲಾಗಿದೆ. ಶಾಲೆಯ ಉತ್ತಮ ಫಲಿತಾಂಶವನ್ನು ನೋಡಿ ಇದನ್ನು ನಗರ ಪ್ರದೇಶಕ್ಕೆ ಸೇರಿಸಿಕೊಳ್ಳಲಾಗಿದೆ. ಮತ್ತೆ ಶಾಲೆಯನ್ನು ಬಿ ವಲಯವನ್ನಾಗಿ ಸರಿಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

 ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv