ಮಕ್ಕಳೇ ಊಟ ತಂದರೂ, ಊಟದ ಫೀಸ್​ ಶಾಲೆಗೆ ಕೊಡ್ಬೇಕಾ..!?

ಆನೇಕಲ್(ಗುಂಜೂರು): ಪ್ರತಿ ವರ್ಷ ಶಾಲೆಯ ಶುಲ್ಕ ಏರಿಕೆ ಮಾಡುತ್ತಿರುವುದರಿಂದ ಗ್ರೀನ್ ವುಡ್ ಹೈ ಸ್ಕೂಲ್​ ವಿರುದ್ಧ ಪೋಷಕರು ತಿರುಗಿ ಬಿದ್ದಿದ್ದಾರೆ. ಶಾಲಾ ಅವರಣದ ಬಳಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು.

ವರ್ತೂರು-ದೊಮ್ಮಸಂದ್ರ ಮುಖ್ಯರಸ್ತೆಯಲ್ಲಿರುವ ಗ್ರೀನ್ ವುಡ್ ಹೈ ಸ್ಕೂಲ್​ನಲ್ಲಿ ಮಕ್ಕಳೇ ತಮ್ಮ ಊಟವನ್ನು ತರಬೇಕು ಎಂದು ಕಡ್ಡಾಯಗೊಳಿಸಿದ್ದಾರೆ. ಅಲ್ಲದೇ, ಊಟಕ್ಕೆ ಪೋಷಕರಿಂದ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 40 ಸಾವಿರ ಶುಲ್ಕ ವಸೂಲಿಯ ಆಡಳಿತ ಮಂಡಳಿಯ ನಿರ್ಧಾರ ಸರಿಯಿಲ್ಲವೆಂದು, ಇದನ್ನು ವಿರೋಧಿಸಿ ಖಾಸಗಿ ಶಾಲೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv