ವೈದ್ಯಕೀಯ, ದಂತ ವೈದ್ಯಕೀಯ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ

ಬಾಗಲಕೋಟೆ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶುಲ್ಕ ಹೆಚ್ಚಳವನ್ನು ಖಂಡಿಸಿ ಇಂದು ಎಬಿವಿಪಿ ನಗರದಲ್ಲಿ ಪ್ರತಿಭಟನೆ ನಡೆಸಿತು. ವಿದ್ಯಾರ್ಥಿಗಳು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರಿ ಕಾಲೇಜಿನ ಸೀಟು 14 ಸಾವಿರದಿಂದ 40 ಸಾವಿರ ಏರಿಕೆ ಆಗಿದೆ. ಖಾಸಗಿ ಕಾಲೇಜಿನಲ್ಲಿನ‌ ಸರ್ಕಾರಿ ಸೀಟು 49-63 ಸಾವಿರಕ್ಕೆ ಏರಿಕೆ ಆಗಿದೆ. ಇದರಿಂದ ವೈದ್ಯಕೀಯ ವ್ಯಾಸಂಗ ಕೇವಲ ಶ್ರೀಮಂತರ ಸ್ವತ್ತಾಗಿ, ಬಡವರಿಗೆ ಕೈಗೆಟುಕದ ಕನಸಾಗುತ್ತದೆ. ಹೀಗಾಗಿ ತಕ್ಷಣ ಸರ್ಕಾರ ಶುಲ್ಕ ಹೆಚ್ಚಳ ನಿರ್ಧಾರ ಹಿಂಪಡಿಯುವಂತೆ ಆಗ್ರಹಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv