ಆಸ್ತಿ ವರ್ಗಾವಣೆ ಶುಲ್ಕದ ಹಣ ಗುಳುಂ ಮಾಡಿದ ಅಧಿಕಾರಿಗಳು..!

ಯಾದಗಿರಿ: ಆಸ್ತಿ ವರ್ಗಾವಣೆ ಶುಲ್ಕ ತುಂಬಬೇಕಾದ್ರು ಜನ್ರು ಹುಷಾರಾಗಿ ತುಂಬಬೇಕು, ಯಾಕೆಂದರೆ ಅಧಿಕಾರಿಗಳು ನೀವು ತುಂಬಿದ ಹಣ ಸರ್ಕಾರದ ಖಾತೆಗೆ ಜಮಾ ಮಾಡದೆ ನುಂಗಿ ಹಾಕ್ತಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಪುರಸಭೆ ಕಾರ್ಯಾಲಯದಲ್ಲಿ ಶುಲ್ಕ ತುಂಬಿರುವ ಹಣವನ್ನು ಅಧಿಕಾರಿಗಳು ನುಂಗಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಗುರುಮಠಕಲ್ ನಿವಾಸಿ ಮಲ್ಲಿಕಾರ್ಜುನ ಶರಣಪ್ಪ ಅವರ ಆಸ್ತಿ ಸಂಖ್ಯೆ 117/2 ಹಾಗೂ ಕುತುಜಾ ಬೇಗಂ ಚಾಂದ್ ಪಾಶಾ ಜಕಾತಿ ಅವರ ಆಸ್ತಿ ಸಂಖ್ಯೆ 2-1-204/3/1 ಇವುಗಳ ವರ್ಗಾವಣೆಗಾಗಿ 10,880 ರೂಪಾಯಿ ಹಾಗೂ 7,200 ರೂಪಾಯಿ ಶುಲ್ಕವನ್ನು ನೀಡಿದ್ದಾರೆ. ಆದರೆ ಲೆಕ್ಕದ ಪುಸ್ತಕದಲ್ಲಿ ಕೇವಲ ನೂರು ರೂಪಾಯಿಗಳು ಪಾವತಿಯಾಗಿರುವಂತೆ ನಮೂದಿಸಲಾಗಿದೆ ಮತ್ತು ಅವರು ಶುಲ್ಕ ಪಾವತಿ ಮಾಡಿದ ರಸೀದಿಗಳ ಪುಸ್ತಕಗಳು ಕಚೇರಿಯಿಂದ ನಾಪತ್ತೆಯಾಗಿವೆ. ಆಸ್ತಿ ವರ್ಗಾವಣೆಯ ಶುಲ್ಕ ಪಾವತಿಯ ರಸೀದಿ ಪುಸ್ತಕಗಳು ನಗರಸಭೆ ಕಾರ್ಯಲಯದಲ್ಲಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಪುರಸಭೆಯ ಲೆಕ್ಕಾಧಿಕಾರಿ ರವಿ ರಾಠೋಡ್ ಹಾಗೂ ಪ್ರಥಮ ದರ್ಜೆ ಸಹಾಯಕ ಅರುಣ ಚೌವ್ಹಾಣ್ ಅವರಿಗೆ ನಗರಸಭೆ ಮುಖ್ಯ ಅಧಿಕಾರಿ ಸೈಯಿದ್ ಅಹ್ಮದ್ ದಖನಿ ನೋಟಿಸ್ ಜಾರಿ ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv