ಜಮೀನಿನ ವಿಚಾರಕ್ಕೆ ಗಲಾಟೆ, ವ್ಯಕ್ತಿ ಮೇಲೆ ಫೈರಿಂಗ್​​

ಬೆಂಗಳೂರು: ಜಮೀನಿನ ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿಯೋರ್ವನ ಮೇಲೆ ಗುಂಡಿನ ದಾಳಿ ನಡೆಸಿರೋ ಘಟನೆ ಆನೇಕಲ್​​ ತಾಲೂಕಿನ ಜಿಗಣಿ ಸಮೀಪದ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ಕರ್ಪುರು ಗ್ರಾಮದ ಸಾದಪ್ಪ ಎನ್ನುವವರು ರಾಮು ಎನ್ನುವವರ ಮೇಲೆ ಫೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ ರಾಮು ಕಾಲಿಗೆ ಗುಂಡು ತಗುಲಿದ್ದು, ತೀವ್ರ ಗಾಯವಾಗಿದೆ. ಗಾಯಾಳು ರಾಮುನನ್ನು ಬೊಮ್ಮಸಂದ್ರದ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ಕೆಲ ವರ್ಷಗಳಿಂದ ವ್ಯಾಜ್ಯ ನಡೆಯುತ್ತಿತ್ತು ಎನ್ನಲಾಗಿದೆ. ಇಂದು ರಾಮು ಜಮೀನು ಸ್ವಚ್ಛ ಮಾಡಲು ತೆರಳಿದ್ದ ವೇಳೆ ಗಲಾಟೆ ನಡೆದಿದೆ. ನಾನು ಜಮೀನು ಮಾಲೀಕ ಎಂದು ಹೇಳಿದ ಸಾದಪ್ಪ, ತನ್ನಲ್ಲಿದ್ದ ಗನ್​​​ನಿಂದ ರಾಮು ಮೇಲೆ ಫೈರಿಂಗ್​ ನಡೆಸಿದ್ದಾರೆ. ಸದ್ಯ ಆರೋಪಿಯನ್ನ ಜಿಗಣಿ ಪೊಲೀಸರು ಬಂಧಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv