ಐಟಿ ವಿಚಾರಣೆಗೆ ಆಗಮಿಸಿದ ನಿರ್ಮಾಪಕ ಜಯಣ್ಣ

ಬೆಂಗಳೂರು: ಜನವರಿ 3 ರಂದು ತಮ್ಮ ಮನೆ ಮೇಲೆ ಐಟಿ ದಾಳಿ ನಡೆದ ವಿಚಾರವಾಗಿ ನಿರ್ಮಾಪಕ ಜಯಣ್ಣ ಇಂದು ಕ್ವೀನ್ಸ್​ ರಸ್ತೆಯ ಐಟಿ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದಾರೆ. ದಾಳಿ ವೇಳೆ ಅಧಿಕಾರಿಗಳು ಹಲವು ದಾಖಲೆಗಳನ್ನ ವಶಕ್ಕೆ ಪಡೆದಿದ್ದ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಜಯಣ್ಣಗೆ ನೋಟಿಸ್​ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಜಯಣ್ಣ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.