FIR ರದ್ದು ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ನಿರ್ಮಾಪಕ

ಬೆಂಗಳೂರು: ಸುಳ್ಳು ಆಸ್ತಿ ದಾಖಲೆ ನೀಡಿ ಹಣ ವಂಚಿಸಿರುವ ಆರೋಪದಲ್ಲಿ FIR ದಾಖಲಾಗಿದ್ದು, ಅದನ್ನು ರದ್ದು ಮಾಡುವಂತೆ ಹಿರಿಯ ನಿರ್ಮಾಪಕ ಬಸಂತಕುಮಾರ್ ಪಾಟೀಲ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ವಿಚಾರಣೆ ನಡೆಸಿದ ಹೈಕೋರ್ಟ್​​ನ ಏಕಸದಸ್ಯ ಪೀಠ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಗಂಗರಾಜು ಹಾಗೂ ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ತುರ್ತು ನೋಟಿಸ್ ನೀಡಿದೆ.

ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ಗಂಗರಾಜು ಮತ್ತು ಬಸಂತ್​ಕುಮಾರ್ ಮಧ್ಯೆ ಮಧ್ಯೆ ಗಲಾಟೆಯಾಗಿತ್ತು. ಈ ಸಂಬಂಧ ಗಂಗರಾಜು, ಬಸಂತ್ ಕುಮಾರ್ ಪಾಟೀಲ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಸದ್ಯ ಹೈಕೋರ್ಟ್​ ವಿಚಾರಣೆಯನ್ನ ಮುಂದೂಡಿದೆ.

ಪ್ರಕರಣದ ಹಿನ್ನೆಲೆ:
ಆಸ್ತಿ ವಿಚಾರ ಸಂಬಂಧ ಗಂಗರಾಜು ಮತ್ತು ಬಸಂತ್ ಕುಮಾರ್ ಪಾಟೀಲ್ ನಡುವೆ ಜಟಾಪಟಿ ನಡೆದಿತ್ತು. ಈ ಸಂಬಂಧ 4 ನೇ ಎಸಿಎಂಎಂ ಕೋರ್ಟ್​ನಲ್ಲಿ ಗಂಗರಾಜು ಬಂಸತ್​ಕುಮಾರ್ ವಿರುದ್ಧ ದೂರು ದಾಖಲಿಸಿದ್ದರು. ನಂತ್ರ ಕೋರ್ಟ್​ ಎಫ್​​ಐಆರ್ ದಾಖಲಿಸುವಂತೆ ಆದೇಶ ನೀಡಿತ್ತು. ಈ ಸಂಬಂಧ ಗಂಗರಾಜು, ಬಸಂತ್​ಕುಮಾರ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು.

ಬಸಂತ್ ಕುಮಾರ್ ಹಾಗೂ ಗಂಗರಾಜು ನಡುವೆ ಮನೆ ಮಾರಾಟ ವ್ಯವಹಾರ ನಡೆದಿತ್ತು. ಈ ವೇಳೆ ಬಸಂತ್ ಕುಮಾರ್ ಬಸಂತ್ ಕುಮಾರ್ ಪಾಟೀಲ್ ಮನೆ ಮಾರಾಟ ವಿಚಾರದಲ್ಲಿ‌ 10 ಕೋಟಿ ವಂಚನೆ ಮಾಡಿದ್ದಾರೆ ಎಂದು ಗಂಗರಾಜು ಆರೋಪಿಸಿದ್ದಾರೆ. ಮಾತುಕತೆ ವೇಳೆ ಬಸಂತ್ ಕುಮಾರ್, ರೆಸಿಡೆನ್ಸಿ 10 ಸಾವಿರ ಚದರ ಅಡಿ ಇದೆ ಎಂದು ಹೇಳಿ 25 ಕೋಟಿ ರೂಪಾಯಿಗೆ ಮಾರಾಟಕ್ಕೆ ಮಾತುಕತೆ ಮಾಡಿದ್ದರಂತೆ. ಅದ್ರಂತೆ 10 ಕೋಟಿ ರೂಪಾಯಿ ನೀಡಿ ಅಗ್ರಿಮೆಂಟ್ ಕೂಡ ಮಾಡಿಸಿಕೊಂಡಿದ್ದರಂತೆ. ಆದರೆ ‘ಬಸಂತ್ ರೆಸಿಡೆನ್ಸಿ’ ಮನೆ ಇರೋದು 8356 ಚದರ ಅಡಿ ಮಾತ್ರ ಅನ್ನೋದು ಗಂಗರಾಜು ಅವರ ಆರೋಪ.