ಪಿಗ್ಗಿ ಲೆಹೆಂಗಾ ತಯಾರಿಸಲು ಬೇಕಾಯ್ತು 12,000 ಗಂಟೆ!

ಪ್ರಿಯಾಂಕ ಚೋಪ್ರಾ, ನಿಕ್​ ಜೋನ್ಸ್​ರ ಮದುವೆ ಧಾಂ ಧೂಂ ಅಂತ ನಡೆದು ಹೋಯ್ತು. ಹಾಲಿವುಡ್​ನ ಪೀಪಲ್ಸ್​ ಟಿವಿಯವರು ಲೈವ್​ ಆಗಿ ‘ಪ್ರಿಕ್​’ ಮದುವೆಯನ್ನ ತೋರಿಸಿದ್ರು. ಅಲ್ಲದೆ, ಪಿಗ್ಗಿ ಮತ್ತು ನಿಕ್​ ಇಬ್ಬರೂ ತಮ್ಮ ಮದುವೆ ಫೊಟೋಸ್​ನ ತಮ್ಮ ಇನ್​ಸ್ಟಾಗ್ರಾಂ ಮತ್ತು ಟ್ವಿಟ್ಟರ್​ ಅಕೌಂಟ್​ನಲ್ಲಿ ಶೇರ್​ ಮಾಡಿದ್ರು. ಇದೆಲ್ಲಾ 3-4 ದಿನಗಳ ಹಳೇ ಸುದ್ದಿ. ಆದ್ರೆ, ದಿಲ್ಲಿನಲ್ಲಿ ನಡೆದ ರಿಸೆಪ್ಷನ್​ನಲ್ಲಿ ಪಿಗ್ಗಿ ಹಾಕಿಕೊಂಡಿದ್ದ ಲೆಹೆಂಗಾ ಮೇಲೆ ಈಗ ಹುಡುಗಿಯರ ಕಣ್ಣ್​ ಬಿದ್ದಿದೆ.

12,000 ಗಂಟೆ ಕೂತು ರೆಡಿ ಮಾಡಿದ್ರು..!
ಪಿಗ್ಗಿ ಮತ್ತು ನಿಕ್​ ಜೋನ್ಸ್​ರ ದಿಲ್ಲಿ ರಿಸೆಪ್ಷನ್‌ಲ್ಲಿ ಪಿಗ್ಗಿ ಹಾಕಿದ ಲೆಹೆಂಗಾನ ಬರೋಬ್ಬರಿ 80 ಕುಶಲಕರ್ಮಿಗಳು​ ರೆಡಿ ಮಾಡಿದ್ದಾರೆ . ಅದೂ ಬರೋಬ್ಬರಿ 12,000 ಗಂಟೆಗಳ ಕಾಲ ಕೂತು. ಇದು ಅಚ್ಚರಿ ಅನಿಸಿದ್ರೂ ಸತ್ಯ. ಅದಕ್ಕೆ ರಿಸೆಪ್ಷನ್‌ನಲ್ಲಿ ಪಿಗ್ಗಿ, ನಿಕ್ ಜೊತೆ ಹಾಗೆ ಲಕಲಕ ಅಂತ ಮಿಂಚುತ್ತಿದ್ದಳು. ಕೇವಲ ರಿಸೆಪ್ಷನ್‌ ಲೆಹಂಗಾ ಅಷ್ಟೇ ಅಲ್ಲ, ಪಿಗ್ಗಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದಾಗ ಧರಿಸಿದ್ದ ಬ್ಲಡ್​ ರೆಡ್​ ಲೆಹೆಂಗಾನ ಒಟ್ಟು 5 ತಿಂಗಳು ಕೂತು ತಯಾರು ಮಾಡಿದ್ರಂತೆ. ಅಲ್ಲದೇ, ಪಿಗ್ಗಿ ಧರಿಸಿದ್ದ ಆಭರಣಗಳಲ್ಲಿ ಅನ್​ಕಟ್​ ಡೈಮೆಂಡ್ಸ್​, ಜಾಪನೀಸ್​ ಪರ್ಲ್ಸ್​ ಮತ್ತು 22 ಕ್ಯಾರೆಟ್‌ ಗೋಲ್ಡ್​ಗಳೇ ತುಂಬಿ ತುಳುಕುತ್ತಿತ್ತು.

 

 

ವಿಶೇಷ ಬರಹ: ರಕ್ಷಾ ಪ್ರಸಾದ್​