ಲಖನೌದಲ್ಲಿ ಪ್ರಿಯಾಂಕಾ ಗಾಂಧಿ ಮೆಗಾ ರೋಡ್​ಶೋ

ಲಖನೌ: ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಬಳಿಕ ಇಂದು ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರಪ್ರದೇಶದಲ್ಲಿ ಬೃಹತ್​ ಱಲಿ ನಡೆಸಿದ್ದಾರೆ. ಮುಂಬರುವ ಸಂಸತ್​ ಚುನಾವಣೆಗೆ ಉತ್ತರಪ್ರದೇಶದಿಂದ ರಣಕಹಳೆ ಊದಿದ್ದಾರೆ. ಸಹೋದರ ರಾಹುಲ್​ ಗಾಂಧಿ, ಉತ್ತರಪ್ರದೇಶ ಪಶ್ಚಿಮ ವಿಭಾಗದ ಉಸ್ತುವಾರಿ ಜ್ಯೋತಿರಾದಿತ್ಯ ಸಿಂಧ್ಯ ಹಾಗೂ ಹಲವು ಕಾಂಗ್ರೆಸ್​​ ಮುಖಂಡರೊಂದಿಗೆ ಪ್ರಿಯಾಂಕಾ ಲಖನೌದಲ್ಲಿ ರೋಡ್​ ಶೋ ನಡೆಸಿದ್ರು. ಈವರೆಗೆ ಅಮೇಥಿ ಮತ್ತು ರಾಯ್​​ಬರೇಲಿಯಲ್ಲಿ ಮಾತ್ರ ರೋಡ್​ಶೋ ನಡೆಸಿದ್ದ ಪ್ರಿಯಾಂಕಾ ಇದೇ ಮೊದಲ ಬಾರಿಗೆ ತಾಯಿ ಹಾಗೂ ಅಣ್ಣನ ಕ್ಷೇತ್ರದ ಹೊರಗೆ ಱಲಿ ನಡೆಸಿದ್ರು.