ರಾಹುಲ್​ ರಾಮ ಆಗಿದ್ದಾಯ್ತು, ಈಗ ಪ್ರಿಯಾಂಕಾ ದುರ್ಗಾ ರೂಪವಂತೆ..!

ಲಖನೌ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಬೆಂಬಲಿಗರು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಯನ್ನ ರಾಮ ಭಕ್ತ ಅಂತ ಕರೆದಿದ್ದಾಯ್ತು. ಈಗ ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನ ದುರ್ಗಾ ಮಾತೆ ಎಂದು ಕರೆದಿದ್ದಾರೆ. ಇಂದು ಲಖನೌದಲ್ಲಿ ಪ್ರಿಯಾಂಕಾ ಗಾಂಧಿ ಬೃಹತ್​ ಱಲಿ ನಡೆಸುತ್ತಿದ್ದಾರೆ. ಈ ಹಿನ್ನೆಲೆ ನಗರದಾದ್ಯಂತ ಫ್ಲೆಕ್ಸ್​​ಗಳನ್ನ ಹಾಕಲಾಗಿದ್ದು, ಇದರಲ್ಲಿ ದೇವಿ ದುರ್ಗೆಯ ಫೋಟೋಗೆ ಪ್ರಿಯಾಂಕಾ ಗಾಂಧಿ ಮುಖವನ್ನ ಎಡಿಟ್​ ಮಾಡಿ ದುರ್ಗೆಯಂತೆ ಚಿತ್ರಿಸಿದ್ದಾರೆ. ಸಹೋದರಿ ಪ್ರಿಯಾಂಕಾ ದುರ್ಗೆಯ ಅವತಾರ. ಸುಳ್ಳುಗಾರರ ಆಡಳಿತವನ್ನ ಸುಟ್ಟು ಭಸ್ಮ ಮಾಡ್ತಾರೆ ಎಂದು ಫ್ಲೆಕ್ಸ್​ನಲ್ಲಿ ಬರೆಯಲಾಗಿದೆ. ನಗರದ ಯೂತ್​ ಕಾಂಗ್ರೆಸ್​ ಮುಖಂಡರೊಬ್ಬರು ಈ ಪೋಸ್ಟರ್​​ಗಳನ್ನ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ರಾಹುಲ್‌ ಗಾಂಧಿ ಱಲಿ ಹಮ್ಮಿಕೊಂಡಿದ್ದರು. ರಾಹುಲ್‌ರನ್ನ ಸ್ವಾಗತ ಮಾಡಿಕೊಳ್ಳಲು ನಗರದಲ್ಲಿ ಹಾಕಲಾಗಿದ್ದ ಪೋಸ್ಟರ್‌ಗಳಲ್ಲಿ, ರಾಹುಲ್‌ ಗಾಂಧಿಯನ್ನ ‘ರಾಮಭಕ್ತ ರಾಹುಲ್‌’ ಅಂತಾ ಕರೆಯಲಾಗಿತ್ತು. ಕೆಲ ಪೋಸ್ಟರ್‌ಗಳಲ್ಲಿ ‘ಪ್ರಧಾನ ಮಂತ್ರಿ ರಾಮಭಕ್ತ ರಾಹುಲ್‌ ಗಾಂಧಿಗೆ ಸ್ವಾಗತ’ ಅಂತಾ ಕರೆದ್ರೆ ಇನ್ನೂ ಕೆಲ ಪೋಸ್ಟರ್‌ಗಳಲ್ಲಿ  ‘ರಾಹುಲ್‌ ಗಾಂಧಿ ರಾಮಮಂದಿರ ಕಟ್ಟಿಸುವ ಭರವಸೆ ನೀಡ್ತಾರೆ’ ಅಂತಾ ಹಾಕಲಾಗಿತ್ತು. ಈ ಹಿಂದೆ, ಪಂಚರಾಜ್ಯ ಚುನಾವಣೆಯಲ್ಲಿ ರಾಹುಲ್‌ ಗಾಂಧಿಯನ್ನು ಶಿವಭಕ್ತ ಅಂತಾ ಕರೆಯಲಾಗಿತ್ತು.  ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿಯರನವನು ರಾವಣ ಎಂದು  ಬಿಂಬಿಸಿ, ರಾಹುಲ್​ ಗಾಂಧಿಯರವನ್ನು ರಾಮನ ರೂಪಿ ಎಂಬ ಫ್ಲೆಕ್ಸ್​ಗಳನ್ನು ಸಹ ಹಾಕಲಾಗಿತ್ತು. ಈ ಉತ್ತರ ಪ್ರದೇಶದಲ್ಲಿ ರಾಹುಲ್​ ಗಾಂಧಿಯವರನ್ನು ರಾಮ ಭಕ್ತ ಎಂದು ಬಿಂಬಿಸುವ ಯತ್ನ ನಡೆಸಲಾಗುತ್ತಿದೆ.