ಜನರಿಗೆ ಮೋಡಿ ಮಾಡಲು ರಾಜ್ಯಕ್ಕೆ ಮೋದಿ ಬರುತ್ತಾರೆ : ಪ್ರಿಯಾಂಕ್ ಖರ್ಗೆ

ಯಾದಗಿರಿ: ಜನರಿಗೆ ಮೋಡಿ ಮಾಡಲು ರಾಜ್ಯಕ್ಕೆ ಮೋದಿ ಬರುತ್ತಾರೆ ಅಷ್ಟೇ. ರಾಜ್ಯದಲ್ಲಿ ಪ್ರಧಾನಿ‌ ಮೋದಿ ಅಬ್ಬರ ನಡೆಯಲ್ಲ, ಸೈನಿಕರ ಹೆಸರಲ್ಲಿ ಪ್ರಚಾರ ನಡೆಸಿ ವಾಪಸ್‌ ತೆರಳುತ್ತಾರೆ. ಅವರ ಮಾತಿಗೆ ಬೆಲೆಯಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಗುರುಮಿಠಕಲ್ ತಾಲೂಕಿನ ಅಲಿಪೂರ ಗ್ರಾಮದಲ್ಲಿ  ಕಲಬುರ್ಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಮತಯಾಚನೆ ವೇಳೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆಗೆ ಸೋಲಿಸುವುದು ಯಾರಿಂದಲು ಸಾಧ್ಯವಿಲ್ಲ. ಗುರುಮಿಠಕಲ್ ಕ್ಷೇತ್ರದ ಯಾರ ಎದೆ ಸೀಳಿದ್ರು ಕೂಡಾ ಖರ್ಗೆ ಸಾಹೇಬ್ರೇ ಕಾಣುತ್ತಾರೆ. ಖರ್ಗೆ ಸಾಹೇಬರಿಗೆ 1972ರಿಂದ ಆಶೀರ್ವಾದ ಮಾಡಿಕೊಂಡು ಬಂದಿರಿ. ಈ ಬಾರಿ ಕೂಡಾ ಆಶೀರ್ವಾದ ಖರ್ಗೆ ಸಾಹೇಬರಿಗೆ ಮಾಡ್ರಿ. ನಾವು ದೇಶಕ್ಕಾಗಿ ಬೆವರು ಹರಿಸಿದ್ದೇವೆ, ರಕ್ತ ಕೊಟ್ಟಿದ್ದೇವೆ, ಬಿಜೆಪಿಯವರು ಎನು ಮಾಡಿದ್ದಾರೆ. ಸಂವಿಧಾನ ರಚೆನೆಯಾದಾಗ ಇವರೆಲ್ಲಾ ಎಲ್ಲಿದ್ರು? ಪುಲ್ವಾಮ ದಾಳಿ ಆದಾಗ ಪ್ರಧಾನಿ ಪೋಟೋ ತಗೊಳ್ತಾ ಇದ್ರು, ಈಗ ಅವರ ಹೆಸರಲ್ಲಿ ಮತ ಕೇಳ್ತಾ ಇದ್ದಾರೆ. ನಾವು ಪ್ರಧಾನ ಮಂತ್ರಿನ ಆಯ್ಕೆ ಮಾಡಿದ್ದಾವಾ ಅಥವಾ ಪ್ರಚಾರಕ ಶೋಕಿದಾರ ಪ್ರಧಾನಿಯನ್ನ ಆಯ್ಕೆ ಮಾಡಿದ್ದೀವಾ? ಹಿಂದುಳಿದವರ, ಅಲ್ಪಸಂಖ್ಯಾತರ, ದಲಿತರ ಮೇಲೆ ಹಲ್ಲೇ, ದರೋಡೆ ನಡಿತಾ ಇದೆ. ಇದೇನಾ ಸಬಕಾ ಸಾತ್ ಸಬಕಾ ವಿಕಾಸ್? ಇಂಥವರು ನಮಗೆ ಪ್ರಧಾನಿಯಾಗಬೇಕಾ? ಎಂದು ಪ್ರಶ್ನಿಸಿದ ಅವರು, ಮೋದಿ ಬಂಡವಾಳಶಾಹಿಗಳ ₹ 3 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದ್ರೆ ರೈತರ ಸಾಲ ಮನ್ನಾ ಮಾಡೋಕೆ ಇವರತ್ತ ದುಡ್ಡಿಲ್ಲ. ಕೇಂದ್ರದಲ್ಲಿ ಮೋದಿ ಎದುರಿಗೆ ಮಾತಾಡೋಕೆ ರಾಜ್ಯದ ಬಿಜೆಪಿಯವರಿಗೆ ಯಾರಿಗೂ ದೈರ್ಯ ಇಲ್ಲ, ಬರಿ ಜೀ ಸರ್ ಜೀ ಸರ್ ಅಂತಾರೆ ಎಂದು ಪ್ರಿಯಾಂಕ್ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಲಿಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರು ಅಧಿಕಾರ ಆಸೆಯಿಂದ ಬಿಜೆಪಿ ಸೇರಿದ್ದಾರೆ. ಜಾಧವ್, ಬಾಬುರಾವ್ ನಂತ ಈ ಜೋಡಿ ಎತ್ತುಗಳಿಗೆ ಇಲ್ಲಿ ಬೆಲೆಯಿಲ್ಲ, ಇವು ಕಳ್ಳ ಎತ್ತುಗಳು.
ಜಾಧವ್ ಅವರು ಬಿಜೆಪಿ ಆಮಿಷಕ್ಕ ಬಲಿಯಾಗಿ ಹೋಗಿದ್ದಾರೆ ಮಾತನಾಡಲು ನೈತಿಕತೆಯಿಲ್ಲ. ಬಾಬುರಾವ್ ಚಿಂಚನಸೂರು ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ, ತಮಗೆ ಬೇಕಾದ ಕಡೆ ಆಮಿಷ ಬಲಿಯಾಗಿ ಜಿಗಿದಿದ್ದಾರೆ. ಶರಣಗೌಡ, ನಾಗನಗೌಡರು ಯಡಿಯೂರಪ್ಪನ ಬಲಿಗೆ ಬಿಳಲಿಲ್ಲ, ಬದಲಿಗೆ ಪಾಪ ಉಮೇಶ ಜಾಧವ್ ಬಲಿಯಾದರು ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ನಮೋ ನಮೋ ಅಂತ ನಮ್ಮ ಯುವಕರು ಅಂತಾರೆ. ರೀ ನಮೋ ನಮೋ ಅಂದ್ರೆ ನರೇಂದ್ರ ಮೋದಿ ಅಲ್ಲಾ, ನಮಗೆ ಮೋಸಾ ಅಂತ ಅರ್ಥ. ಅವನು ಚೌಕಿದಾರಂತೆ, ಅವನು ಮೊದಲು ಚಾಯಿ ವಾಲಾ ಇದ್ದ
ಪ್ರಧಾನ ಮಂತ್ರಿ ಯಾಕ್ರೀ ಚೌಕಿದಾರ ಆಗಬೇಕು? ಇದೇ 23 ರಂದು ಚೌಕಿದಾರನ ಬದಲಾಯಿಸಿರಿ ಎಂದು ಮತದಾರರಲ್ಲಿ ಮನವಿ ಮಾಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv