ಮೋದಿ ಸಮಾವೇಶದಲ್ಲಿ ಪೆಟ್ಟಿಗೆ ಸಾಗಿಸಿರೋದು ಶಂಕೆಗೆ ಕಾರಣವಾಗಿದೆ: ಪ್ರಿಯಾಂಕ್ ಖರ್ಗೆ

ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿ ಸಮಾವೇಶದ ವೇಳೆ ತರಾತುರಿಯಲ್ಲಿ ಪೆಟ್ಟಿಗೆ ಸಾಗಿಸಿರುವ ಸಂಬಂಧ ಬಿಜೆಪಿ ಸ್ಪಷ್ಟನೆ ನೀಡಬೇಕು ಅಂತಾ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ನಗರದಲ್ಲಿ ಫಸ್ಟ್​ನ್ಯೂಸ್​ ಜೊತೆ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಬಿಜೆಪಿ ನಡೆಸಿದ ಸಮಾವೇಶದಲ್ಲಿ ಪೆಟ್ಟಿಗೆ ಸಾಗಿಸಲಾಗಿದೆ. ಶಿಷ್ಟಾಚಾರ ಇದ್ದರೂ ತರಾತುರಿಯಲ್ಲಿ ಪೆಟ್ಟಿಗೆಯನ್ನ ಯಾಕೆ ಸಾಗಿಸಿದರು? ಎಸ್‌ಪಿಜಿ ಭದ್ರತೆಯಲ್ಲಿ ಪೆಟ್ಟಿಗೆಯನ್ನ ಖಾಸಗಿ ಕಾರಿಗೆ ಸಾಗಿಸಲಾಗಿದೆ. ಇದು ಸಂಶಯಕ್ಕೆ ಕಾರಣವಾಗಿದೆ. ಇದರ ಬಗ್ಗೆ ಸಂಬಂಧಪಟ್ಟವರು ಸ್ಪಷ್ಟನೆ ನೀಡಬೇಕು ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಹೆಲಿಕಾಪ್ಟರ್​​ನಿಂದ ಸೀಕ್ರೆಟ್​​ ಬಾಕ್ಸ್​ ಸಾಗಣೆ: ಕಪ್ಪುಪೆಟ್ಟಿಗೆ ಬಗ್ಗೆ ಕಾಂಗ್ರೆಸ್​​ ಅನುಮಾನ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv