ರಮೇಶ್ ​​ಜಾರಕಿಹೊಳಿ ಅಸಮಾಧಾನ ಉಪಚುನಾವಣೆ ಮೇಲೆ ಪರಿಣಾಮ ಬೀರಲ್ಲ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಪಕ್ಷದ ನಾಯಕರ ಜೊತೆ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಲು ಈಗಲೂ ಅವಕಾಶಗಳಿವೆ. ಅವರು ಮೊದಲು ಪಕ್ಷದ ಮುಖಂಡರ ಜೊತೆ ಕುಳಿತು ಮಾತನಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಅಸಮಾಧಾನದ ವಿಚಾರವಾಗಿ  ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಉಪಚುನಾವಣೆ ಮೇಲೆ ಇವೆಲ್ಲಾ ಪರಿಣಾಮ ಬೀರುವುದಿಲ್ಲ. ಬಿಜೆಪಿಯವರು ಮತ್ತೆ ಇನ್ನೊಂದು ಡೆಡ್ ಲೈನ್ ಕೊಟ್ಟಿದಾರೆ ಅಷ್ಟೆ. ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ ಅಂತ ಹೇಳಿದ್ರು.

ಇನ್ನು ಚಿಂಚೋಳಿ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಪಕ್ಷವೇ ಗೆಲ್ಲಲಿದೆ ಎಂದು ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಉಮೇಶ್ ಜಾಧವ್ ಹೇಗೆ ಪಕ್ಷ ಬಿಟ್ಟು ಹೋದರು ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರಾಮಾಣಿಕ ಆಡಳಿತ ಕೊಡ್ತೀವಿ ಅನ್ನೋ ಮೋದಿ ಇದರ ಬಗ್ಗೆ ಏನಂತಾರೆ..? ಎಂದು ಪ್ರಶ್ನಿಸಿದ್ರು. ಬಜೆಟ್ ಅಧಿವೇಶನ ನಡೆಯುವ ವೇಳೆ ಆಪರೇಷನ್ ಕಮಲದ ಬಗ್ಗೆಯೇ ಚರ್ಚೆ ಆಗಿದೆ. ಉಪಚುನಾವಣೆಯಲ್ಲಿ ಜನ ಖಂಡಿತಾ ನಮಗೆ ಬೆಂಬಲ ಕೊಡ್ತಾರೆ ಎಂದು ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv