ಎಡಗಾಲು ನೋವಿನಿಂದ ಚೇತರಿಸಿಕೊಳ್ತಿದ್ದಾರೆ ಪೃಥ್ವಿ ಶಾ

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಎಡಗಾಲಿನಲ್ಲಿ ಉಂಟಾದ ನೋವಿನಿಂದಾಗಿ ಯುವ ಆಟಗಾರ ಪೃಥ್ವಿ ಶಾ ಆಟದಿಂದ ಹೊರಗುಳಿದಿದ್ರು. ಬಾಲ್​ ಹಿಡಿಯಲು ಹೋಗಿ ಎಡಗಾಲಿನ ಪಾದಕ್ಕೆ ನೋವುಂಟು ಮಅಡಿಕೊಂಡಿದ್ದ ಶಾ ಮತ್ತೆ ತಂಡಕ್ಕೆ ಮರಳ್ತಾರಾ ಅನ್ನೋ ಪ್ರಶ್ನೆ ಎದುರಾಗಿತ್ತು. ನವೆಂಬರ್​ 14 ರಂದು ನಡೆಯುವ ಎರಡನೇ ಪಂದ್ಯದಲ್ಲಿ ಶಾ ಕಾಣಿಸಿಕೊಳ್ತಾರೆ ಎನ್ನಲಾಗಿತ್ತು.ಆದ್ರೆ ಅದು ಸಾದ್ಯವಾಗಿರಲಿಲ್ಲ. ಈ ಕುರಿತು ಮಾತನಾಡಿರುವ ಭಾರತ ತಂಡದ ಕೋಚ್​ ರವಿಶಾಸ್ತ್ರಿ, ಶಾ ಚೇತರಿಸಿಕೊಳ್ತಿದ್ದಾರೆ. ಅವರು ಈಗಾಗಲೇ ನಡೆಯಲು ಪ್ರಾರಂಭಿಸಿದ್ದಾರೆ, ಶೀಘ್ರವೇ ಅವರು ಗುಣಮುಖರಾಗಲಿದ್ದಾರೆ ಅಂತ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv