ಯುವ ಕ್ರಿಕೆಟಿಗ ಪೃಥ್ವಿ ಶಾಗೆ ಅಭಿಮಾನಿಗಳಿಂದ ಫುಲ್ ಕ್ಲಾಸ್..!

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಪೃಥ್ವಿ ಶಾಗೆ, ಕ್ರಿಕೆಟ್ ಅಭಿಮಾನಿಗಳು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇತ್ತೀಚಿಗಷ್ಟೆ ಶಾ, ಸ್ಟೈಲ್​ ಆಗಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು, ಓವರ್ ಕಾನ್ಫಿಡೆನ್ಸ್​ನಿಂದ ಫೋಟೋಗೆ ಪೋಸ್ ಕೊಡುವ ದೃಶ್ಯವನ್ನ, ತನ್ನ ಟ್ವಿಟ್ಟರ್ ಅಕೌಂಟ್​ನಲ್ಲಿ ಅಪ್​ಲೋಡ್ ಮಾಡಿಕೊಂಡಿದ್ದರು. ಇಷ್ಟಾಗಿದ್ರೆ ಪರವಾಗಿರಲಿಲ್ಲ..! ಆದ್ರೆ ಪೃಥ್ವಿ ಶಾ ಬರೆದ ಕ್ಯಾಪ್ಶನ್, ಎಲ್ಲರ ಹುಬ್ಬೇರುವಂತೆ ಮಾಡಿತ್ತು. ” If u kick me when i am down. You better pray i dont get up” ಅಂತ ಬರೆದುಕೊಂಡಿದ್ರು. ಪೃಥ್ವಿ ಶಾ ಟ್ವಿಟ್ಟರ್ ಖಾತೆ ನೋಡುತ್ತಿದಂತೆ ಕ್ರಿಕೆಟ್ ಅಭಿಮಾನಿಗಳು, ಯುವ ಕ್ರಿಕೆಟಿಗನಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ್ರು. ಕ್ರಿಕೆಟ್​ನತ್ತ ಗಮನ ಹರಿಸು ಅಂತ, ಸಲಹೆ ಸಹ ನೀಡಿದ್ರು.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv