ಜೈಲಿನ ತೆಂಗಿನ ಮರದಿಂದ ಕೆಳಗೆ ಬಿದ್ದು ಕೈದಿ ಸಾವು

ದಾವಣಗೆರೆ: ಕಾರಾಗೃಹದಲ್ಲಿ ಕೈದಿಯೋರ್ವ ತೆಂಗಿನ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಿಂಗಪ್ಪ ಮೃತ ಕೈದಿ. ನಿಂಗಪ್ಪ ಬೆಳ್ಳಂಬೆಳಗ್ಗೆ ಕಾರಾಗೃಹದ ಆವರಣದಲ್ಲಿರುವ ತೆಂಗಿನ ಮರವೇರಿದ್ದ. ತಕ್ಷಣಕ್ಕೆ ಸ್ಥಳಕ್ಕೆ ಬಂದ ಪೊಲೀಸರು ಕೆಳಗೆ ಇಳಿಯುವಂತೆ ಮನವಿ ಮಾಡಿದರೂ ಆತ ಸ್ಪಂದಿಸಲಿಲ್ಲ. ಕೊನೆಗೆ ಅಗ್ನಿಶಾಮಕ ದಳ ಸಿಬ್ಬಂದಿಯನ್ನ ಕರೆಸಿ, ಆತನನ್ನ ರಕ್ಷಿಸಲು ಮುಂದಾದಾಗ ಕೈದಿ ನಿಂಗಪ್ಪ ಜಾರಿ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಕೈದಿ ನಿಂಗಪ್ಪ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ. ಮೃತ ನಿಂಗಪ್ಪ ತೆಂಗಿನ ಮರವೇರಿದ್ದು ಏಕೆ ಎಂಬುದು ತಿಳಿದುಬಂದಿಲ್ಲ. ನಿಂಗಪ್ಪ ಮರದಿಂದ ಕೆಳಗೆ ಬಿದ್ದಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv