ಓವರ್ ಫಿಶಿಂಗ್ ವಿರುದ್ಧ ಮಾಡೆಲ್ ಕ್ರೆಸ್ಸಿಡಾ ನಗ್ನ ಪ್ರತಿಭಟನೆ..!

ಬ್ರಿಟನ್ ರಾಜಕುಮಾರ್ ಪ್ರಿನ್ಸ್ ಹ್ಯಾರಿ ಮಾಜಿ ಗೆಳತಿ ಕ್ರೆಸ್ಸಿಡಾ ಬೋನಾಸ್ ಓವರ್ ಫಿಶಿಂಗ್ ವಿರುದ್ಧ ಬೆತ್ತಲೆಯಾಗಿ ಫೋಸ್ ನೀಡಿದ್ದಾರೆ. ‘ಆಂಟಿ ಓವರ್ ಫಿಶಿಂಗ್ ಅಭಿಯಾನ’ದ ಜತೆ ಕೈ ಜೋಡಿಸಿರುವ ಮಾಡೆಲ್ ಕ್ರೆಸ್ಸಿಡಾ, ಓವರ್ ಫಿಶಿಂಗ್ ವಿರುದ್ಧ ವಿವಿಧ ಭಂಗಿಗಳಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ್ದಾರೆ. ಈ ಮೂಲಕ ತಾವು ವೈಯಕ್ತಿಕವಾಗಿ ಓವರ್ ಫಿಶಿಂಗ್ ವಿರೋಧಿಸುತ್ತೇನೆ ಅಂದಿದ್ದಾರೆ.

29 ವರ್ಷದ ಮಾಡೆಲ್ ಕ್ರೆಸ್ಸಿಡಾ ಬೋನಾಸ್, ಕಾನ್ಫಿಡೆನ್ಸ್ ಭಂಗಿಯಲ್ಲಿ ಮೈ ಮೇಲೆ ಯಾವುದೇ ಬಟ್ಟೆ ಇಲ್ಲದೇ, ಫಿಶ್ ಮೈಮೇಲೆ ಇಟ್ಟುಕೊಂಡು. ಸೆಕ್ಸಿಯಾಗಿ ಪೋಸ್ ನೀಡಿರುವ ಫೋಟೋ ಕಪ್ಪು ಬಿಳುಪು ಬಣ್ಣದಲ್ಲಿದೆ. ಈ ಅಭಿಯಾನದಲ್ಲಿ ಡೌನ್ಟೌನ್ ಅಬ್ಬೆ ಸ್ಟಾರ್ ಎಲಿಜಿಬತ್ ಹಾಗೂ ಮೈಕಲ್ ಜಾಕ್ಸನ್ ಪುತ್ರಿ ಜತೆಗೆ ಮಾಡೆಲ್ ಕ್ರೆಸ್ಸಿಡಾ ಈ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಡೆಲ್ ಕ್ರೆಸ್ಸಿಡಾ, ಸುಂದರವಾದ ಸಮುದ್ರದಲ್ಲಿ ಮೀನುಗಾರಿಕೆಯನ್ನು ನಾಶಪಡಿಸುವುದಿಲ್ಲ, ಕರಾವಳಿ ಸಮುದಾಯದವರ ಉದ್ಯೋಗ ಹಾಗೂ ಸಮುದ್ರವನ್ನೇ ಅವಲಂಬಿಸಿರುವ ಜನರನ್ನು ನಾನು ನೋಯಿಸುವುದಿಲ್ಲ. ಈ ಕಾರಣಕ್ಕಾಗಿ ಜಾಗೃತಿ ಮೂಡಿಸಿದ್ದೇನೆ. ಈ ಅಭಿಯಾನದಲ್ಲಿ ಭಾಗಿಯಾಗಿದ್ದಕ್ಕೆ ಇಷ್ಟಪಡುತ್ತೇನೆ, ನನಗೆ ಹೆಮ್ಮೆಯಾಗುತ್ತದೆ ಎಂದು ಕ್ರೆಸ್ಸಿಡಾ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv