ಟ್ವಿಟರ್‌ ಫಾಲೋವರ್ಸ್​; ಪ್ರಧಾನಿಗೆ ಎಷ್ಟನೇ ಸ್ಥಾನ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸದ್ಯ ಜಾಗತಿಕವಾಗಿ ಜನಪ್ರಿಯತೆ ಗಳಿಸುತ್ತಿರುವ ನಾಯಕರಲ್ಲಿ ಒಬ್ಬರು. ಇದೀಗ ಮೋದಿ ಜನಪ್ರಿಯತೆ ಮತ್ತೊಂದು ಮಜಲಿಗೆ ಬಂದು ನಿಂತಿದೆ. ಟ್ವಿಟರ್​​ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ಜಗತ್ತಿನ ಮೂರನೇ ನಾಯಕ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹಾಗೂ ಪೋಪ್ ಫ್ರಾನ್ಸಿಸ್​ ನಂತರ ಮೂರನೇ ಸ್ಥಾನದಲ್ಲಿ ಮೋದಿ ಇದ್ದಾರೆ. ನರೇಂದ್ರ ಮೋದಿಯ ಟ್ವಿಟರ್​ನ ವೈಯಕ್ತಿಕ ಖಾತೆಗೆ ಸುಮಾರು 4.2 ಕೋಟಿಗೂ ಅಧಿಕ ಫಾಲೋವರ್ಸ್​ ಇದ್ದಾರೆ. ಇನ್ಸ್‌ಟಿಟ್ಯೂಷನಲ್ ಖಾತೆಯಲ್ಲಿ 2.6 ಕೋಟಿ ಹಿಂಬಾಲಕರಿದ್ದಾರೆ. ಇನ್ನು ಟಾಪ್​ ಟೆನ್ ಲಿಸ್ಟ್​ನಲ್ಲಿ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌, ಜೋರ್ಡಾನ್​ನ ಕ್ವೀನ್ ರನಿಯಾ, ಇಂಡೋನೆಷಿಯಾದ ಅಧ್ಯಕ್ಷ ಜೊಕೊವಿ ಕೂಡ ಸ್ಥಾನ ಪಡೆದಿದ್ದಾರೆ.