ರೋಡ್​ ಶೋ ಬಳಿಕ ಗಂಗಾರತಿಯಲ್ಲಿ ಪ್ರಧಾನಿ ಮೋದಿ ಭಾಗಿ

ವಾರಣಾಸಿ: ನಗರದಲ್ಲಿ ಭರ್ಜರಿ ರೋಡ್​ ಶೋ ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ದಶಾಶ್ವಮೇಧ ಘಾಟ್​ನಲ್ಲಿ ನಡೆದ ಗಂಗಾ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಪ್ರಧಾನಿ ಮೋದಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಮಹೇಂದ್ರ ನಾಥ್ ಪಂಡೆಯ್ ಸಾಥ್ ನೀಡಿದರು. ಮಂತ್ರ, ಘೋಷಣೆಗಳೊಂದಿಗೆ ಗಂಗೆಗೆ ಆರತಿ ಮಾಡಲಾಯಿತು. ಇದಕ್ಕೂ ಮೊದಲು ಪ್ರಧಾನಿ ಮೋದಿ ವಾರಣಾಸಿಯಲ್ಲಿ ರೋಡ್​ ಶೋ ನಡೆಸಿದ್ರು. ಈ ವೇಳೆ ಲಕ್ಷಾಂತರ ಅಭಿಮಾನಿಗಳ ಜನಸಾಗರ ಹರಿದು ಬಂದಿತ್ತು.

ಇದನ್ನೂ ಓದಿ: ಕಾಶಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್​ ಶೋ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv