ಕಾಶಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್​ ಶೋ

ವಾರಣಾಸಿ (ಉತ್ತರ ಪ್ರದೇಶ): ನಾಳೆ ವಾರಣಾಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೃಹತ್ ರೋಡ್ ಶೋ ನಡೆಸುತ್ತಿದ್ದಾರೆ. ಬನಾರಸ್​ ಹಿಂದೂ ವಿಶ್ವವಿದ್ಯಾಲಯದ ಎದುರಿನಿಂದ ರೋಡ್​ ಶೋ ಆರಂಭವಾಗಿದೆ. ಮೋದಿ ಅವರ ರೋಡ್​ ಶೋಗೆ ಲಕ್ಷಾಂತರ ಮಂದಿ ಹಾಜರಾಗಿದ್ದಾರೆ.

ರೋಡ್​​ ಶೋ ಆರಂಭಕ್ಕೂ ಮೊದಲು ಪ್ರಧಾನಿ ಮೋದಿ ಅಲ್ಲಿನ ಮದನ್ ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದರು. 7 ಕಿಲೋಮೀಟರ್ ರೋಡ್ ಶೋ ನಡೆದು ದಶಾಶ್ವಮೇಧ ಘಾಟ್​ನಲ್ಲಿ ಅಂತ್ಯಗೊಳ್ಳಲಿದೆ. ರೋಡ್ ಶೋ ವೇಳೆ ಸುಮಾರು 150 ಕಡೆಗಳಲ್ಲಿ ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ಮೋದಿಯವರಿಗೆ ಸ್ವಾಗತ ಕೋರಲಿದ್ದಾರಂತೆ. ಸಂಜೆ 6.30ಕ್ಕೆ ದಾಶಶ್ವಮೇಧ ಘಾಟ್​ನಲ್ಲಿ ಮೋದಿ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv