ವೋಟ್​​ ಹಾಕೋ ಮುನ್ನ ತಾಯಿ ಆಶೀರ್ವಾದ ಪಡೆದ ಮೋದಿ

ಅಹಮದಾಬಾದ್​​: ದೇಶಾದ್ಯಂತ ಇಂದು ಲೋಕಸಭಾ ಚುನಾವಣೆಗೆ ಮೂರನೇ ಹಂತದ ಮತದಾನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಅಹಮದಾಬಾದ್​​​ನಲ್ಲಿ ಮತಚಲಾವಣೆ ಮಾಡಿದ್ದಾರೆ. ಈ ಹಿನ್ನೆಲೆ ಅವರು ಈಗಾಗಲೇ ಅಹಮದಾಬಾದ್​​ನ ತಮ್ಮ ತಾಯಿಯ ನಿವಾಸಕ್ಕೆ ಆಗಮಿಸಿದ್ದಾರೆ. ಮತದಾನಕ್ಕೂ ಮುನ್ನ ಮೋದಿ, ತಮ್ಮ ತಾಯಿ ಹೀರಾಬೆನ್​ ಮೋದಿ ಅವರಿಂದ ಆಶೀರ್ವಾದ ಪಡೆದರು.

ಮೋದಿ ಆಗಮನದ ಹಿನ್ನೆಲೆ ಈಗಾಗಲೇ ಮತಗಟ್ಟೆ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ, ಗಾಂಧಿನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಮಿತ್​ ಶಾ ಕೂಡ ಮತಗಟ್ಟೆ ಬಳಿ ಕಾಯುತ್ತಿದ್ದಾರೆ. ಮೋದಿ ತಾಯಿಯ ನಿವಾಸದ ಬಳಿಯೂ ಕೂಡ ಅಕ್ಕಪಕ್ಕದ ಮನೆಯವರು ಬಂದು ಪ್ರಧಾನಿಯನ್ನು ಮಾತನಾಡಿಸಿದ್ರು.