ಪ್ರೀಮಿಯರ್ ಪದ್ಮಿನಿಯಿಂದ ಲೇಡಿಸ್ ಫ್ಯಾನ್ಸ್​ ಜಾಸ್ತಿ ಆಗ್ತಾರೆ!

ನವರಸ ನಾಯಕ ಜಗ್ಗೇಶ್ ಅಭಿನಯದ ಹಾಸ್ಯದ ಜೊತೆ ಸೀರಿಯಸ್ ವಿಚಾರವೊಂದನ್ನ ಹೇಳೋಕೆ ಬರ್ತಿರೋ ಪ್ರೀಮಿಯರ್ ಪದ್ಮಿನಿ ಚಿತ್ರ ನಾಳೆ ತೆರೆಗೆ ಬರ್ತಿದೆ. ಪ್ರೀಮಿಯರ್ ಪದ್ಮಿನಿ ಇಂಪ್ಯಾಕ್ಟ್ ಜಗ್ಗೇಶ್ ನಿಜಜೀವನದಲ್ಲೂ ಬೀರಲಿದೆಯಂತೆ. ಪ್ರೀಮಿಯರ್ ಪದ್ಮಿನಿಯಿಂದ ಲೇಡಿ ಫ್ಯಾನ್ಸ್​ ಜಾಸ್ತಿ ಆಗ್ತಾರೆ ಅಂತಾರೆ ಜಗ್ಗೇಶ್.

‘ಈ ಚಿತ್ರ ದುಡುಕಿನ ಹೆಂಡತಿ, ತಾಳ್ಮೆಯ ಗಂಡ ಇಬ್ಬರ ನಡುವಿನ ನಡುವೆ ನಡೆಯೋ ಕಥೆ. ಅದ್ರಲ್ಲೂ ಹೆಣ್ಮಕ್ಳು ಖುಷಿಯಾಗೋ ಕಥೆಯಿದೆ. ನನ್ನ ಆರಂಭದ ಸಿನಿಮಾಗಳ ಪಾತ್ರಗಳಲ್ಲಿ ಡಬಲ್ ಮೀನಿಂಗ್ ಮಾಡ್ತಾರೆ ಅಂತೆಲ್ಲಾ ಅಪವಾದ ಇತ್ತು. ನಾನು ಅಮ್ಮನ ಮಗ. ಹೆಣ್ಣನ್ನ ಅಗಾಧವಾಗಿ ಗೌರವಿಸ್ತಿನಿ. ಆದ್ರೆ ಅದು ನನ್ನ ವೈಯಕ್ತಿಕ ಜೀವನಕ್ಕೆ ಸಂಪಾದನೆಗೆ ಅನಿವಾರ್ಯವಾಗಿತ್ತು. ಅದಕ್ಕೆ ಊಟ ಕೊಡ್ತಾರೆ ಅಂದ್ರೆ ಬರೀ ಚಡ್ಡಿಯಲ್ಲಾದ್ರೂ ನಟಿಸ್ತಿದ್ದೆ. ಆದ್ರೆ ಈಗ ನಾನು ಪಾತ್ರವನ್ನ ಆಯ್ಕೆ ಮಾಡಿಕೊಳ್ಳೋ ಸ್ಥಿತಿಯಿದೆ. ಹೀಗಾಗಿ ನನ್ನ ಪ್ರೇಕ್ಷಕರಿಗಾಗೇ ನನ್ನ ಪಾತ್ರ ಜವಾಬ್ದಾರಿಯಿಂದ ಆರಿಸಿಕೊಳ್ತಿನಿ. ಈ ಕಥೆಯಲ್ಲಿ ನನ್ನ ಪಾತ್ರ ನೋಡಿ ನನ್ನ ಹೆಣ್ಣು ಕುಲದ ಅಭಿಮಾನಿಗಳು ಹೆಚ್ಚಾಗ್ತಾರೆ. ಅಂಥಾ ಮೆಸೇಜ್ ಇರೋದ್ರಿಂದಲೇ ನಾನು ಈ ಸಿನಿಮಾ ಆರಿಸಿಕೊಂಡಿದ್ದೀನಿ. ಖಂಡಿತ ಈ ಚಿತ್ರದಿಂದ ನನಗೆ ಲೇಡಿ ಫ್ಯಾನ್ಸ್ ಜಾಸ್ತಿಯಾಗ್ತಾರೆ ಅಂದ್ರು.