ದತ್ತು ಮಕ್ಕಳಿಂದ ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿದ ಪ್ರೇಮ್

ಲವ್ಲಿ ಸ್ಟಾರ್ ಪ್ರೇಮ್ ತಮ್ಮ 25ನೇ ಚಿತ್ರ “ಪ್ರೇಮಂ ಪೂಜ್ಯಂ ಮೂಲಕ ತೆರೆ ಮೇಲೆ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಪ್ರೀತಿ ಹಂಚೋಕೆ ಬರ್ತಿದ್ದಾರೆ. ಅಷ್ಟೇ ಅಲ್ಲ ನಿಜಜೀವನದಲ್ಲೂ ಇವ್ರು ಪ್ರೀತಿ ಹಂಚ್ತಿದ್ದಾರೆ. ನಿನ್ನೆ ವಿಶೇಷ ಚೇತನ ಮಕ್ಕಳೊಟ್ಟಿಗೆ ಹುಟ್ಟಹಬ್ಬವನ್ನ ಆಚರಿಸಿಕೊಂಡ ಪ್ರೇಮ್, ದತ್ತು ಪಡೆದ ಮಕ್ಕಳ ಕೈಯಲ್ಲಿ ಪ್ರೇಮಂ ಪೂಜ್ಯಂ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿದ್ದಾರೆ. ಈ ವಿಷಯವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರೋ ಪ್ರೇಮ್, ರೆಬೆಲ್ ಸ್ಟಾರ್ ಅಂಬರೀಶ್ ಅವರು ನಮ್ಮನ್ನಗಲಿರೋ ನೋವು ನನಗಿನ್ನೂ ಹೋಗಿಲ್ಲ. ಹೀಗಾಗಿ ನಾನು ಬರ್ತ್‌ಡೇ ಸೆಲೆಬ್ರೇಟ್ ಮಾಡ್ತಿಲ್ಲ. ಆದ್ರೆ ಪ್ರತಿ ವರ್ಷ ನಾನು ದೇವರ ಮಕ್ಕಳ ಜೊತೆ ಸೆಲೆಬ್ರೇಟ್ ಮಾಡ್ಕೋತಿನಿ. ನಮ್ಮ ಚಿತ್ರದ ನಿರ್ದೇಶಕರು ತುಂಬಾ ಒಳ್ಳೇ ಕೆಲಸ, ಅವರ ಕೈನಲ್ಲೇ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿ. ಅವರದ್ದು ನಿಷ್ಕಲ್ಮಶ ಮನಸ್ಸು ಅಂದ್ರು. ನನಗೂ ಸರಿ ಅನ್ನಿಸಿತು. ಹೀಗಾಗಿ ಅವರೇ ಕೈನಲ್ಲಿ ರಿಲೀಸ್ ಮಾಡಿಸಿದ್ದೀನಿ ಎಂದಿದ್ದಾರೆ.

ಪ್ರೇಮಂ ಪೂಜ್ಯಂ ಮೋಷನ್ ಪೋಸ್ಟರ್ ಮಸ್ತ್!
ಈಗಾಗ್ಲೇ”ಪ್ರೇಮಂ ಪೂಜ್ಯಂ ನ ಫಸ್ಟ್‌ಲುಕ್ ಕುತೂಹಲ ಹೆಚ್ಚಿಸಿತ್ತು. ಈಗ ರಿಲೀಸ್ ಆಗಿರೋ 1 ನಿಮಿಷ 8 ಸೆಕೆಂಡ್‌ಗಳ ಮೋಷನ್ ಪೋಸ್ಟರ್‌ನಲ್ಲಿ ಸ್ಟೈಲಿಶ್ ಬ್ಯುಸಿನೆಸ್ ಮ್ಯಾನ್‌ ಆಗಿ ಪ್ರೇಮ್ ಕಾಣಿಸಿಕೊಂಡಿದ್ದಾರೆ. ತಮ್ಮ ಗೆಟಪ್ ಚೇಂಜ್ ಮಾಡ್ಕೊಂಡು ಫುಲ್ ಬದಲಾಗಿರೋ ಪ್ರೇಮ್‌, ವೃತ್ತಿ ಜೀವನದಲ್ಲಿ ಈ ಚಿತ್ರ ಒಂದು ಮೈಲಿಗಲ್ಲಾಗೋದ್ರಲ್ಲಿ ಡೌಟಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನೆನಪಿರಲಿ,ಚಾರ್ ಮಿನಾರ್, ಚೌಕ ಹೀಗೆ 17 ವರ್ಷಗಳಲ್ಲಿ 24 ಸಿನಿಮಾದಲ್ಲಿ ‌ಬಣ್ಣ ಹಚ್ಚಿರುವ ಪ್ರೇಮ್ ಸದ್ಯ ತನ್ನ 25 ನೇ ಸಿನಿಮಾದಲ್ಲಿ ಅಪರೂಪದ ಪಾತ್ರದಲ್ಲಿ ಮಿಂಚಲು‌ ರೆಡಿಯಾಗಿದ್ದಾರೆ. ಡಾ.ರಾಘವೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ, ಪ್ರೇಮ್ ನಾಲ್ಕು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.