ದಿ ವಿಲನ್‌ ಬಗ್ಗೆ ಇಡೀ ಇಂಡಿಯಾ ಮಾತನಾಡಲಿದೆ..! ಹೇಗೆ ಗೊತ್ತಾ..?

ಜೋಗಿ ಪ್ರೇಮ್‌ ಅಂದ್ರೆನೇ ಅಬ್ಬರ. ಅವ್ರು ಏನೇ ಮಾಡಿದ್ರು ಸೌಂಡ್‌ ಆಗುತ್ತೆ. ಸುದ್ದಿಯಾಗುತ್ತೆ. ಅಂತ ಫಿಲಂ ಮೇಕರ್‌. ಅವ್ರು ಯಾವುದೇ ಸಿನಿಮಾ ಮಾಡಿದ್ರು ಆ ಸಿನಿಮಾಗೆ ಅಂತಹ ಪವರ್‌ ಬಂದು ಬಿಡುತ್ತೆ. ಆದ್ರೆ ವಿಲನ್‌ ವಿಚಾರದಲ್ಲಿ ಅದು ಸ್ವಲ್ಪ ಜಾಸ್ತಿನೇ ಆಗಿದೆ. ಹೌದು, ದಿ ವಿಲನ್ ಸಿನಿಮಾ ಪ್ರಾದೇಶಿಕ ಮಾರುಕಟ್ಟೆಯ ಮಿತಿಯನ್ನ ಮೀರಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗ್ತಿದೆ. ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಯಾರೂ ಮಾಡಿರದ ಪ್ರಚಾರದ ಸಾಹಸವನ್ನ ಡೈರೆಕ್ಟರ್ ಪ್ರೇಮ್‌ ಮಾಡ್ತಿದ್ದಾರೆ. ಈ ಹಿಂದೆಯೇ ಜೋಗಿ, ಜೋಗಯ್ಯ, ರಾಜ್‌ ಸಿನಿಮಾಗಳನ್ನ ಪ್ರಾದೇಶಿಕ ಮಾರುಕಟ್ಟೆಯ ಮಿತಿಯನ್ನ ಮೀರಿ ಪ್ರಚಾರ ಮಾಡಿದ್ರು, ರಿಲೀಸ್‌ ಮಾಡಿ ಬ್ಯುಸಿನೆಸ್‌ ಕೂಡ ಮಾಡಿದ್ರು. ಅದ್ರಂತೆ, ದಿ ವಿಲನ್‌ ಸಿನಿಮಾವನ್ನ ಅದ್ರ ಹತ್ತುಪಟ್ಟು ಹೆಚ್ಚು ರೀಚ್‌ ಮಾಡೋದಕ್ಕೆ ಸಜ್ಜಾಗಿದ್ದಾರೆ ಪ್ರೇಮ್‌. ಅಷ್ಟೇ ಬ್ಯುಸಿನೆಸ್‌ ಮಾಡೋ ಭರವಸೆಯನ್ನೂ ಹುಟ್ಟಿಸಿದ್ದಾರೆ ಪ್ರೇಮ್‌.
ಇದು ಕನ್ನಡ ಚಿತ್ರರಂಗದಲ್ಲೇ ಮೊದಲು..!
ಹೌದು, ದಿ ವಿಲನ್‌ ಚಿತ್ರದ ನಿರ್ದೇಶಕ ಜೋಗಿ ಪ್ರೇಮ್‌, ಈ ಸಿನಿಮಾ ಮೂಲಕ ಇಡೀ ದೇಶ ಮಾತನಾಡುವಂತಹ, ಕನ್ನಡ ಚಿತ್ರರಂಗದ ಇತರ ನಿರ್ದೇಶಕರೂ ನೋಡಿ ಸ್ಫೂರ್ತಿಗೊಳ್ಳುವಂತಹ ಕೆೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದಕ್ಕೆ ಇಂಟರ್‌ನ್ಯಾಷಿನಲ್‌ ಬ್ರ್ಯಾಂಡ್‌ಗಳನ್ನಿಟ್ಟುಕೊಂಡು ಇನ್‌ ಫಿಲಂ ಬ್ರ್ಯಾಂಡಿಂಗ್‌ ಮಾಡಿದ್ದಾರೆ. ಡಿಜಿ ಫಾರ್ಮರ್ಸ್‌ ಸ್ಟುಡಿಯೋಸ್‌ ಅನ್ನೋ ಹೊಸ ಕಂಪನಿಯ ಸಹಯೋಗದೊಂದಿಗೆ ಪ್ರೇಮ್‌ ಅಂತರಾಷ್ಟ್ರೀಯ ಮಟ್ಟದ ಬ್ರ್ಯಾಂಡ್‌ಗಳನ್ನ ತಮ್ಮ ಸಿನಿಮಾದೊಂಗಿದೆ ಟೈಯಪ್‌ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಆ ಇಂಟರ್‌ನ್ಯಾಷಿನಲ್‌ ಬ್ರ್ಯಾಂಡ್‌ಗಳೊಂದಿಗೆ ದಿ ವಿಲನ್‌ ಸಿನಿಮಾವನ್ನ ಇಡೀ ಇಂಡಿಯಾ ರೀಚ್‌ ಮಾಡ್ತಿದ್ದಾರೆ. ಆ ಎಲ್ಲಾ ಬ್ರ್ಯಾಂಡ್‌ಗಳು, ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ದಿ ವಿಲನ್‌ ಸಿನಿಮಾವನ್ನ ಪ್ರಮೋಟ್‌ ಮಾಡಲಿವೆಯಂತೆ. ಈಗಾಗ್ಲೇ ಆ ವಿಚಾರದಲ್ಲಿ ಎಲ್ಲಾ ತಯಾರಿಗಳು ನಡೆದಿದ್ದು, ಆಡಿಯೋ ಮತ್ತು ಪ್ರೀರಿಲೀಸ್‌ ಫಂಕ್ಷನ್‌ನೊಂದಿಗೆ ಇದ್ರ ಪ್ರಚಾರ ಕಾರ್ಯ ಶುರುವಾಗಲಿದೆಯಂತೆ.
ದೇಶದಾದ್ಯಂತ ವಿಲನ್‌ಗೆ ಹುಟ್ಟಿಕೊಂಡಿದೆ ಬೇಡಿಕೆ
ದಿ ವಿಲನ್‌ ಸಿನಿಮಾದ ಪ್ರಚಾರ ಇಡೀ ದೇಶವ್ಯಾಪಿ ಆಗ್ತಿದ್ದು, ಈ ಸಿನಿಮಾ ಬಗ್ಗೆ ಕನ್ನಡೇತರರು ಮಾತನಾಡುವಂತಾಗ್ತಿದೆ. ಅದು ಒಂದು ವಿಷ್ಯವಾದ್ರೆ, ಮತ್ತೊಂದು ಈ ಚಿತ್ರದ ಸ್ಟಾರ್‌ ಕಾಸ್ಟ್‌ ಮತ್ತು ತಂಡ ಹಾಗಿದೆ. ಜೋಗಿ ಪ್ರೇಮ್‌ ಅಂತಹ ಸ್ಟಾರ್‌ ಡೈರೆಕ್ಟರ್‌ ಜೊತೆಗೆ, ಡಾ. ಶಿವರಾಜ್‌ಕುಮಾರ್‌ ಮತ್ತು ಕಿಚ್ಚ ಸುದೀಪ್‌, ಌಮಿ ಜಾಕ್ಸನ್‌, ಮಿಥುನ್‌ ಚಕ್ರವರ್ತಿ ಅಂತಹ ದೊಡ್ಡ ಸ್ಟಾರ್‌ಗಳಿದ್ದಾರೆ. ತಂತ್ರಜ್ಞರಿದ್ದಾರೆ. ಒಂದು ರೀತಿ ಈ ಚಿತ್ರದಲ್ಲಿ ಪಂಚಭಾಷಾ ತಾರೆಯರ ಸಂಗಮವಾಗಿದೆ ಅಂತ ಹೇಳಿದ್ರೆ, ತಪ್ಪಾಗಲ್ಲ. ಇವೆಲ್ಲಾದ್ರ ಎಫೆಕ್ಟ್‌ ದಿ ವಿಲನ್‌ ಸಿನಿಮಾಗೆ ಆಗ್ಲೇ ಸೌತ್‌ ಮಾರ್ಕೆಟ್‌ನಲ್ಲಿ ಮತ್ತು ಓವರ್ಸೀಸ್‌ನಲ್ಲಿ ಭಾರಿ ಬೇಡಿಕೆ ವ್ಯಕ್ತವಾಗ್ತಿದೆ. ಈಗಾಗ್ಲೇ ಬಿಕೆಟಿ ಏರಿಯಾ ಹಂಚಿಕೆಯ ಹಕ್ಕು ಸೋಲ್ಡೌಟ್‌ ಆಗಿದ್ದು, ಕರ್ನಾಟಕದಲ್ಲಿ ದಿ ವಿಲನ್‌ ಸಿನಿಮಾದ ರೇಟೂ ದಿನೇ ದಿನೇ ಜಾಸ್ತಿಯಾಗ್ತಿದೆ.
ನಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv