43ರ ವಯಸ್ಸಿನಲ್ಲೂ ಮೋಡಿ ಮಾಡುತ್ತೆ ‘ಪ್ರೀತಿ‘ಯ ಸೌಂದರ್ಯ..!

ಸೆಲೆಬ್ರಿಟಿಗಳ ಫಿಟ್‌ನೆಸ್ ಇತತರಿಗೂ ಸ್ಫೂರ್ತಿ. ಬಿ-ಟೌನ್‌ನಲ್ಲಿ ಪ್ರೀತಿ ಝಿಂಟಾ ಚಾರ್ಮ್, ಸೌಂದರ್ಯ, ಅದ್ಭುತ ನಟನಾ ಕೌಶಲ್ಯಕ್ಕೆ ಮನ ಸೋಲದವರೇ ಇಲ್ಲ. 43ರ ವಯಸ್ಸಿನಲ್ಲೂ ಪ್ರೀತಿ ಝಿಂಟಾ ಚಾರ್ಮ್ ಮಾತ್ರ ಕಮ್ಮಿ ಆಗಿಲ್ಲ. ಫಿಟ್‌ನೆಸ್ ವಿಷಯದಲ್ಲೂ ಎಲ್ಲರಿಗೂ ಅವರು ಸ್ಫೂರ್ತಿಯಾಗಿದ್ದಾರೆ. ರಿಯಲ್ ಲೈಫ್‌ನಲ್ಲಿ ಅವರ ಫಿಟ್‌ನೆಸ್ ಹೇಗಿರಲಿದೆ ಎಂಬುದು ಎಲ್ಲರಲ್ಲೂ ಎಕ್ಸೈಟ್‌ಮೆಂಟ್ ಇದ್ದೇ ಇರುತ್ತೆ. ಅವರ ವರ್ಕೌಟ್ ಹೇಗಿರಲಿದೆ? ಇಲ್ಲಿದೆ ಡಿಟೇಲ್ಸ್‌.

ತಮ್ಮ ಫಿಟ್‌ನೆಸ್ ಬಗ್ಗೆ ಪ್ರೀತಾ ಝಿಂಟಾ ಪ್ರತಿಬಾರಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಈಗ ತಮ್ಮ ಫಿಟ್‌ನೆಸ್ ಬಗ್ಗೆ ಹಂಚಿಕೊಂಡಿದ್ದಾರೆ. ಪ್ರೀತಿ ಝಿಂಟಾ ಪ್ರತಿನಿತ್ಯ ವರ್ಕೌಂಟ್ ತುಂಬಾ ಶಿಸ್ತಿನಿಂದ ಮಾಡುತ್ತಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ. ತೂಕ ಇಳಿಕೆಗೆ ಸಂಬಂಧಪಟ್ಟ ವ್ಯಾಯಾಮಗಳನ್ನು ಮಾಡುತ್ತಾರೆ. ಅವರಿಗೆ ಸ್ಪೋರ್ಟ್ಸ್‌ಗಳಲ್ಲಿ ಭಾಗಿಯಾಗುವುದು ಅಂದ್ರೆ ತುಂಬಾ ಇಷ್ಟವಂತೆ. ತಮ್ಮ ದೇಹವನ್ನು ಶೇಪ್‌ನಲ್ಲಿ ಇರಿಸಿಕೊಳ್ಳಲು ಪ್ರತಿನಿತ್ಯ ಯೋಗಾಸನ ಮಾಡುತ್ತಾರೆ. ಪ್ರತಿ ನಿತ್ಯ 7 ಗಂಟೆ ನಿದ್ದೆ ಮಾಡುವುದು ಅವರ ಸೌಂದರ್ಯದ ಸಿಕ್ರೆಟ್.

ಡಯಟ್‌ ವಿಷಯದಲ್ಲೂ ಪ್ರೀತಿ ಝಿಂಟಾ ಎತ್ತಿದ ಕೈ. ಆಹಾರ ಕ್ರಮದ ಬಗ್ಗೆ ಅವರು ಜಾಗರೂಕತೆ ವಹಿಸುತ್ತಾರೆ. ಹಣ್ಣಿನ ಜ್ಯೂಸ್, ಹಸಿರು ತರಕಾರಿ, ಕ್ಯಾರೆಟ್‌ ಹೆಚ್ಚಾಗಿ ಸೇವಿಸುತ್ತಾರಂತೆ. ದಿನಕ್ಕೆ 6 ರಿಂದ 7 ಬಾರಿ ಪ್ರೀತಿ ಝಿಂಟಾ ಮಿತ ಆಹಾರ ಸೇವಿಸುತ್ತಾರೆ. ಕ್ಯಾರೆಟ್ ಹಲ್ವಾ, ಬರ್ಗರ್, ಆಲು ಪರಟಾ ಇವೆಲ್ಲಾ ಪ್ರೀತಿ ಝಿಂಟಾ ಡಯಟ್ ಲಿಸ್ಟ್‌ನಲ್ಲಿ ಕೂಡಿರುತ್ತವೆ. ಅಲ್ಲದೇ ಅವರು ಹೆಚ್ಚು ನೀರು ಕುಡಿಯುತ್ತಾರಂತೆ. ಇದ್ರಿಂದ ದೇಹದ ಮೈಕಟ್ಟು ಹಾಗೂ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯ ಅನ್ನೋದು ಪ್ರೀತಿ ಅಭಿಪ್ರಾಯ.