ಖಾಸಗಿ ಆಸ್ಪತ್ರೆ ವೈದ್ಯೆಯ ಯಡವಟ್ಟು, ಬಾಣಂತಿಯ ಬಲಗೈ ಕಟ್​​..

ಬಾಗಲಕೋಟೆ: ಖಾಸಗಿ ಆಸ್ಪತ್ರೆಯ ವೈದ್ಯೆಯ ಯಡವಟ್ಟಿನಿಂದಾಗಿ ಐದು ತಿಂಗಳ ಗರ್ಭಿಣಿ ತನ್ನ ಬಲಗೈ ಕಳೆದುಕೊಂಡ ಘಟನೆ ಇಲಕಲ್​ನಲ್ಲಿ ನಡೆದಿದೆ. ಬಾಣಂತಿಗೆ ರಕ್ತ ಪೂರೈಸುವ ವೇಳೆ ಅಸಮರ್ಪಕವಾಗಿ ಚಿಕಿತ್ಸೆ ನೀಡಿದ ಪರಿಣಾಮ ಮಹಿಳೆಯ ಬಲಗೈಯಲ್ಲಿ ಗುಳ್ಳೆ ಎದ್ದು ಬಾವು ಕಾಣಿಸಿಕೊಂಡಿದೆ.
ಅಲ್ಲದೇ ಬಾವು ಹೆಚ್ಚಾಗಿ ಗ್ಯಾಂಗ್ರಿನ್​​ಗೆ ಬದಲಾಗಿದೆ. ಗರ್ಭಿಣಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಆಸ್ಪತ್ರೆಯ ವೈದ್ಯರು ಕೈ ಕಟ್​ ಮಾಡಿ ಮಹಿಳೆಯನ್ನು ಉಳಿಸಿದ್ದಾರೆ.
ಇಳಕಲ್​​ ನಗರದ ಸಂಜೀವಿನಿ ಶಾವಿ ಆಸ್ಪತ್ರೆಯ ವೈದ್ಯೆ ಶೋಭಾ ನಿರ್ಲಕ್ಷದಿಂದ ಗರ್ಭಿಣಿಯ ಕೈ ಕಟ್​ ಆಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ವೈದ್ಯೆಯ ವಿರುದ್ಧ ಪೊಲೀಸರಿಗೆ ದೂರು ನೀಡಲು ಮಹಿಳೆಯ ಕುಟುಂಬದವರು ಮುಂದಾಗಿದ್ದಾರೆ. ಇನ್ನು ಕೈ ಕಳೆದುಕೊಂಡ ಗರ್ಭಿಣಿ ಶಿಲ್ಪಾ ಸದ್ಯ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೂನ್​​ 4ರಂದು ಶಿಲ್ಪಾರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಸಂಜೀವಿನಿ ಶಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್​​ 6ರಂದು ರಕ್ತ ಪೂರೈಕೆ ಮಾಡಲಾಗಿತ್ತು. ಜೂನ್​ 8ರಂದು ​​ ಶಿಲ್ಪಾ ಅವರನ್ನು ಡಿಸ್ಚಾರ್ಜ್ ಮಾಡಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಮಾಡಿದ 3 ತಾಸಿನ ನಂತರ ​​ ಶಿಲ್ಪಾ ಕೈಯಲ್ಲಿ ಗುಳ್ಳೆ ಮತ್ತು ಬಾವು ಕಾಣಿಸಿಕೊಂಡಿತ್ತು. ವೈದ್ಯರು ಬಾವು ತೆಗೆಯಲು ಆಪರೇಷನ್​ ಮಾಡಿದ್ದರು. ಆದರೆ ಆಪರೇಷನ್​ ಬಳಿಕ ಕೈ ನಂಜಾಗಿ ಮತ್ತೆ ಗುಳ್ಳೆಬಾವು ಕಾಣಿಸಿಕೊಂಡಿತ್ತು. ನಂತರ ಬಾಗಲಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಶಿಲ್ಪಾ ಗುಣಮುಖರಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv